ಇರುವೈಲು | 1 ಕೋ. ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ಮೂಡುಬಿದಿರೆ : ಲೋಕೋಪಯೋಗಿ ಇಲಾಖೆ ಮತ್ತು ಶಾಸಕರ ವಿಶೇಷ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಮೂಡುಬಿದಿರೆ ತಾಲೂಕಿನ ಕುಪ್ಪೆಪದವು - ಇರುವೈಲು - ಮೂಡುಬಿದಿರೆ ಜಿಲ್ಲಾ ಮುಖ್ಯರಸ್ತೆಯ ಕಿ.ಮೀ 4.93 ರಿಂದ 5.26 ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಮಂಗಳವಾರ ದಂಬೆದಕೋಡಿಯಲ್ಲಿ ಶಿಲಾನ್ಯಾಸಗೈದರು.
ನಂತರ ಮಾತನಾಡಿದ ಕೋಟ್ಯಾನ್ ಅವರು, ಇಕ್ಕಟ್ಟಿನ ರಸ್ತೆ ಮತ್ತು ಕಿರಿದಾದ ಸೇತುವೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ದಂಬೆದಕೋಡಿ ಭಾಗದ ಜನರ ಬಹು ಕಾಲದ ಬೇಡಿಕೆಯಾಗಿತ್ತು. ಶೀಘ್ರವಾಗಿ ರಸ್ತೆ ಕಾಮಗಾರಿಯನ್ನು ಪೂಣ೯ಗೊಳಿಸಬೇಕೆಂದು ಪಿಡಬ್ಲ್ಯುಡಿ ಇಲಾಖೆಗೆ ಸೂಚಿಲಾಗಿದೆ. ಆದ್ದರಿಂದ ಆದಷ್ಟು ಬೇಗ ಇಲ್ಲಿನ ಜನರ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ನ ಸದಸ್ಯ ವಲೇರಿಯನ್ ಕುಟಿನ್ಹಾ ಮಾತನಾಡಿದರು.
ಪಂಚಾಯತ್ ಸದಸ್ಯರಾದ ನಾಗೇಶ್ ಅಮೀನ್ , ನವೀನ್ ಪೂಜಾರಿ ಕಿಟ್ಟುಬೆಟ್ಟು, ಮೋಹಿನಿ.ಎಸ್ ಪೂಜಾರಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಸ್ಥಳದಾನಿಗಳಾದ ರಾಕೇಶ್ ವಿಕ್ರಂ ಭಟ್ ದಂಬೆಕೋಡಿ, ಸತ್ಯಪ್ರಕಾಶ್ ಭಟ್ ನಡುಮನೆ, ರವಿ ನಾಯ್ಕ್ , ಕೆಡಿಪಿ ಸದಸ್ಯ ಪ್ರವೀಣ್ ಪೂಜಾರಿ, ಹೊಸಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ವಕೀಲ ಕೆ ಚಂದ್ರಹಾಸ ಶೆಟ್ಟಿ, ಪಂ.ಮಾಜಿ ಸದಸ್ಯ ಪೂವಪ್ಪ ಸಾಲ್ಯಾನ್ , ರಾಮಕೃಷ್ಣ ಪೆಜತ್ತಾಯ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್, ಬಾಲಚಂದ್ರ ಶೆಟ್ಟಿ, ದಿನೇಶ್ ಶೆಟ್ಟಿ ದೊಡ್ಡಗುತ್ತು, ಹಿರಿಯರಾದ ಮುತ್ತಪ್ಪ ಪೂಜಾರಿ, ವಾಸುದೇವ ಸಾಮಂತ್, ಜಿ. ಪಂ.ಸಹಾಯಕ ಇಂಜಿನಿಯರ್ ಹೇಮಂತ್ ಕುಮಾರ್, ಗುತ್ತಿಗೆದಾರ ಅಬ್ದುಲ್ ನಾಸಿರ್ ಕೆ. ಸ್ಥಳೀಯ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.







