ಮೂಡುಬಿದಿರೆ | ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಢಿಕ್ಕಿ ಹೊಡೆದ ಲಾರಿ

ಮೂಡುಬಿದಿರೆ, ಡಿ.10: ಚಾಲಕನ ನಿಯಂತ್ರಣ ತಪ್ಪಿದಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಗೂಗಲ್ ಮ್ಯಾಪ್ ಹೇಳಿಕೊಟ್ಟ ದಾರಿಯಲ್ಲಿ ಸರಕು ತುಂಬಿಸಿಕೊಂಡು ಹೋದ ಚಾಲಕ ರಾತ್ರಿ ಎರಡು ಗಂಟೆ ವೇಳೆ ಕಡಂದಲೆ ಇಳಿಜಾರು ಪ್ರದೇಶದ ತಿರುವಿನಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಹೊಸ ರಸ್ತೆಯಾಗಿರುವುದರಿಂದ ಗೊಂದಲ ಉಂಟಾಗಿದ್ದಲ್ಲದೆ, ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಗೋಡೆಗೆ ಢಿಕ್ಕಿಯಾಗಿದೆ.
ಈ ಕುರಿತು ಚಾಲಕ ಮಾಹಿತಿ ನೀಡಿದ್ದು, ನಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಪೇಪರ್ ಮಿಲ್‌ಗೆ ಹೋಗಬೇಕಿದ್ದು, ಗೂಗಲ್ ಮ್ಯಾಪ್ ಅನುಸರಿಸಿ, ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





