ಮೂಡುಬಿದಿರೆ : ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಕವನ ಪಿ ಜೈನ್ ಉತ್ತೀರ್ಣ

ಮೂಡುಬಿದಿರೆ : ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಬ್ಲೊಸಮ್ ಆಂಗ್ಲ ಮಾಧ್ಯಮ ಶಾಲೆ, ಬೆಳುವಾಯಿಯ 9ನೇ ತರಗತಿ ವಿದ್ಯಾರ್ಥಿನಿ ಕವನ ಪಿ ಜೈನ್ ಉತ್ತೀರ್ಣರಾಗಿದ್ದಾರೆ.
ಇವರು ನಾಗಶ್ರೀ ಪ್ರವೀಣ್ ಜೈನ್ ಇವರ ಪುತ್ರಿಯಾಗಿದ್ದು, ಶಾಲೆಯ ಮೊದಲ ಬ್ಲ್ಯಾಕ್ ಬೆಲ್ಟ್ ಪಡೆದ ವಿದ್ಯಾರ್ಥಿನಿಯಾಗಿದ್ದಾರೆ.
ಮೂಡುಬಿದಿರೆಯಲ್ಲಿ ಏಪ್ರಿಲ್ 22 ಮತ್ತು 23 ರಂದು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಅಫ್ ಮಾರ್ಷಲ್ ಆರ್ಟ್ಸ್ ನಿಂದ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿ ಕವನ ಅವರು ಮಾಧವ ಅಳಿಕೆ ಮತ್ತು ವಿಕ್ಟರ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್ ಎನ್ ಇವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
Next Story





