ಮೂಡುಬಿದಿರೆ: ಮಾಡದಂಗಡಿ ಅಂಗನವಾಡಿಯಲ್ಲಿ ಎಲ್.ಕೆ.ಜಿ , ಯು.ಕೆ.ಜಿ. ಪ್ರಾರಂಭ

ಮೂಡುಬಿದಿರೆ : ಇಂದಿನಿಂದ ರಾಜ್ಯದ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಗೊಳ್ಳಲಿರುವ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳ ಪೈಕಿ ಮೂಡುಬಿದಿರೆ ವಲಯದ ಮಾಡದಂಗಡಿ ಅಂಗನವಾಡಿಗೆ ಮಂಜೂರಾದ ಈ ತರಗತಿಯನ್ನು ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಶಾಲಾಕ್ಷಿ ಅವರು ಶುಕ್ರವಾರ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಬಂಗೇರ ಅವರು ಮಾತನಾಡಿ, ಸರಕಾರದ ಈ ಯೋಜನೆ ಮತ್ತು ಇಲಾಖೆಯ ಸುವರ್ಣ ಸಂಭ್ರಮದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಕಾರ್ಯದರ್ಶಿ ಶೇಖರ್, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶಮೀಮಾ,ಮಾಡದಂಗಡಿ ಶಾಲಾ ಶಿಕ್ಷಕಿ ರಶ್ಮಿ ಎಂ.ಎಸ್, ಆಶಾ ಕಾರ್ಯಕರ್ತರಾದ ಕವಿತಾ, ಪ್ರಮೀಳಾ, ಪಂಚಾಯತ್ ಸಿಬ್ಬಂದಿ ಸೌಮ್ಯ,ಅಂಗನವಾಡಿ ಸಹಾಯಕರಾದ ವೇದಾವತಿ ,ಜಯ ಮತ್ತು ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸುನೀತಾ ಅವರು ಸ್ವಾಗತಿಸಿ ವಂದಿಸಿದರು.
Next Story





