ಮೂಡುಬಿದಿರೆ: ಚಲಿಸುತ್ತಿದ್ದ ಓಮ್ನಿ ಬೆಂಕಿಗಾಹುತಿ

ಮೂಡುಬಿದಿರೆ: ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಬಹುತೇಕ ಸುಟ್ಟು ಕರಕಲಾದ ಘಟನೆ ಪುತ್ತಿಗೆ ಸಮೀಪದ ಹಂಡೇಲಿನಲ್ಲಿ ಬುಧವಾರ ನಡೆದಿದೆ.
ಓಮ್ನಿಯಲ್ಲಿ ಗ್ಯಾಸ್ ಸಿಲಿಂಡರ್ ಅಳವಡಿಸಲಾಗಿತ್ತೆನ್ನಲಾಗಿದ್ದು ಅದರಲ್ಲಿ ಸೋರಿಕೆ ಉಂಟಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಓಮ್ನಿ ಚಾಲಕ ಸೇರಿದಂತೆ ಇಬ್ಬರು ವಾಹನದಲ್ಲಿದ್ದು ಬೆಂಕಿ ಕಾಣಿಸಿಕೊಂಡ ತಕ್ಷಣ ಅವರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story







