ಮೂಡುಶೆಡ್ಡೆ: ತಾಯಿಗೆ ಹಲ್ಲೆಗೈದ ಮಗಳ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಮೂಡುಶೆಡ್ಡೆ ಗ್ರಾಪಂನಲ್ಲಿ 65ರ ಹರೆಯದ ನಿರ್ಮಲಾ ಎಂಬವರಿಗೆ ಹಲ್ಲೆಗೈದ ಆಕೆಯ ಪುತ್ರಿ 35ರ ನೇತ್ರಾವತಿ ಎಂಬಾಕೆಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷೆಯಾಗಿರುವ ರಮಿತಾ ಸೂರ್ಯವಂಶಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ.25ರಂದು ಮಧ್ಯಾಹ್ನ 1 ಗಂಟೆಗೆ ಮೂಡುಶೆಡ್ಡೆ ಗ್ರಾಪಂ ಎದುರು ತಾಯಿಗೆ ಮಗಳು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ನ.29ರ ಪೂ. 11ಕ್ಕೆ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ವಿಚಾರಿಸಿದಾಗ ಯಾವುದೇ ದೂರು ದಾಖಲಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂತು. ಹಾಗಾಗಿ ತಾನು ದೂರು ದಾಖಲಿಸುತ್ತಿದ್ದು, ಕಾನೂನು ಕ್ರಮ ಜರುಗಿಸುವಂತೆ ಮತ್ತು ಮಗಳಿಂದ ಹಲ್ಲೆಗೊಳಗಾದ ತಾಯಿಯ ಬಗ್ಗೆಯೂ ಮಾಹಿತಿ ನೀಡುವಂತೆ ರಮಿತಾ ಸೂರ್ಯವಂಶಿ ಡಿ.1ರಂದು ಮನವಿ ಮಾಡಿದ್ದಾರೆ.
Next Story





