ʼಸಂಸದರ ನಡೆ ಗ್ರಾಮದ ಕಡೆʼ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರೊಂದಿಗೆ ಸಂಸದ ಬ್ರಿಜೇಶ್ ಚೌಟ ಸಂವಾದ

ಸುಳ್ಯ: ʼಸಂಸದರ ನಡೆ ಗ್ರಾಮದ ಕಡೆʼ ಕಾರ್ಯಕ್ರಮದಡಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಗುರುವಾರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ.
ತಾಲೂಕಿನ ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರುವಿನ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸ್ಥಳೀಯರ ಕುಂದು-ಕೊರತೆ ಆಲಿಸಿದರು. ಬಳಿಕ ಪ್ರತಿಕ್ರಿಯಿಸಿರುವ ಸಂಸದರು ಕ್ಷೇತ್ರದ ಪ್ರತಿಯೊಂದು ವಿಭಾಗದ ಜನರನ್ನು ತಲುಪುವ ಮೂಲಕ ಅವರ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂಬ ಆಶಯ ನನ್ನದು. ಜನರ ಸಮಸ್ಯೆಗಳು-ಸವಾಲುಗಳಿಗೆ ಖುದ್ದು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಮುಖಂಡರಾದ ವೆಂಕಟ್ ದಂಬೇಕೋಡಿ, ಕಿಶೋರ್ ಶಿರಾಡಿ, ವಿನಯ್ ಮುಳುಗಾಡು, ವಿನಯ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕೇಶವ ಭಟ್ ಮುಳಿಯ, ಶ್ರೀಕಾಂತ್ ಮಾವಿನಕಟ್ಟೆ, ಸೋಮಶೇಖರ್ ಕಟ್ಟೆಮನೆ, ಚಂದ್ರಹಾಸ ಶಿವಾಲ, ಎ.ಟಿ. ಕುಸುಮಾಧರ್ ಮತ್ತಿತರರು ಉಪಸ್ಥಿತರಿದ್ದರು.





