ಮುಡಿಪು: ಕೃತಕ ಕಾಲು, ಕೈ ಜೋಡಣೆಗೆ ಅವಕಾಶ

ಕೊಣಾಜೆ, ಆ.6: ಮಜ್ಲಿಸ್ ಎಜು ಪಾರ್ಕ್ ಮುಡಿಪು ಇದರ ಮಜ್ಲಿಸ್ ಹೆಲ್ತ್ ಆ್ಯಂಡ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಉಚಿತ ಕೃತಕ ಕಾಲು ಮತ್ತು ಕೈ ಜೋಡಣೆ ಶಿಬಿರವು ಮುಡಿಪುವಿನ ಮಜ್ಲಿಸ್ ನಗರದಲ್ಲಿ ನಡೆಯಲಿದೆ.
ಆ.31ರಂದು ಕೈ ಮತ್ತು ಕಾಲಿನ ಅಳತೆ ಹಾಗೂ ಸೆಪ್ಟಂಬರ್ 12ರಂದು ಜೋಡಣೆ ಕಾರ್ಯಕ್ರಮವು ಬೆಳಗ್ಗೆ 10ರಿಂದ ಸಂಜೆ 5ರ ತನಕ ನಡೆಯಲಿದೆ ಹೆಸರು ನೋಂದಣಿ ಮತ್ತು ಮಾಹಿತಿಗೆ ಎಂ. ರಫೀಕ್ ಪಾಣೇಲ (ಮೊ.ಸಂ: 9008855404) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





