ಡಿ.23ರಂದು ಪಂಪ್‌ವೆಲ್‌ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ, ಹಿಮಮಿ ಸಂಗಮ
ಮಂಗಳೂರು, ಡಿ.21: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕ ರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28ರಿಂದ 31 ರ ತನಕ ನಡೆಯಲಿದೆ.ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮವನ್ನು ಡಿಸೆಂಬರ್ 23ರಂದು ಮಂಗಳೂರು ಪಂಪ್‌ವೆಲ್‌ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್‌ನ ಡಿಕೆಎಸ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಳ್ ಹಾಗೂ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಳ್ ಅವರು ನೇತೃತ್ವ ವಹಿಸಲಿದ್ದಾರೆ. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಷರಫುದ್ದೀನ್ ತಂಙಳ್ ಪರೀಧ್‌ನಗರ, ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಮುಸ್ಲಿಂ ಜಮಾಅತ್ ಪ್ರ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ, ಎಸ್‌ವೈಎಸ್ ಪ್ರ.ಕಾರ್ಯದರ್ಶಿ ಕೆ ಎಮ್ ಸಿದ್ದೀಖ್ ಮೋಂಟುಗೋಳಿ, ಕೆಸಿಎಫ್ ಅಂತರ್‌ರಾಷ್ಟ್ರೀಯ ಸಮಿತಿ ಪ್ರ ಕಾರ್ಯದರ್ಶಿ ಇಕ್ಬಾಲ್ ಬರಕ ಓಮಾನ್, ಎಸ್ ಎಮ್ ಎ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ, ಎಸ್ ಜೆ ಎಂ ಪ್ರ. ಕಾರ್ಯದರ್ಶಿ ಮುಹಮ್ಮದ್ ಮದನಿ, ಎಸ್‌ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಲಿಕೆ, ಕರ್ನಾಟಕ ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸ ಅದಿ,ಕೆಕೆಎಂ ಕಾಮಿಲ್ ಸಖಾಫಿ , ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸ್ಹಾಕ್ ಹಾಜಿ ಬೊಳ್ಳಾಯಿ ಸಮೇತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9.30 ರಿಂದ ಅಪರಾಹ್ನ 1.30ರ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





