ಮುಲ್ಕಿ | ಕೊಲ್ನಾಡು ಫ್ರೆಂಡ್ಸ್ ವಾರ್ಷಿಕ ಸಭೆ: ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಆಯ್ಕೆ

ಮುಲ್ಕಿ: ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್(ರಿ.) ಇದರ ವಾರ್ಷಿಕ ಮಹಾಸಭೆಯು ಎ.ಎಚ್.ಕಚೇರಿಯಲ್ಲಿ ಶನಿವಾರ ನಡೆಯಿತು.
ಈ ವೇಳೆ ಮುಂದಿನ ಅವಧಿಗೆ ಹನ್ನೊಂದು ಸದಸ್ಯರನ್ನೊಳಗೊಂಡ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ತೌಸೀಫ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಶಾಝ್, ಉಪಾಧ್ಯಕ್ಷರಾಗಿ ಇಮ್ರಾನ್, ಜೊತೆ ಕಾರ್ಯದರ್ಶಿಯಾಗಿ ಜಮಾಲ್ ಆಯ್ಕೆಯಾದರು.
ಸಲಹೆಗರರಾಗಿ ಮುಹಮ್ಮದ್ ಆಲಿ ಅತ್ರಾಡಿ ಹಾಗೂ ಸದಸ್ಯರಾಗಿ ನಿಸಾರ್, ಇಕ್ಬಾಲ್, ಅನೀಝ್, ಶಹೀರ್, ಸಾದಿಕ್ ಆಯ್ಕೆಯಾಗಿದ್ದಾರೆ.
Next Story





