ಮುಲ್ಕಿ | ಮೂರುಕಾವೇರಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

Photo : Meta AI
ಮುಲ್ಕಿ, ಡಿ.10: ಕಿನ್ನಿಗೋಳಿ ಸಮೀಪದ ಮೂರುಕಾವೇರಿಯಲ್ಲಿ ಚಿರತೆಯೊಂದು ರಸ್ತೆ ದಾಟುತ್ತಿರುವುದನ್ನು ವಾಹನ ಚಾಲಕರು ನೋಡಿದ್ದಾರೆ.
ಮೂರು ಕಾವೇರಿಯಿಂದ ದಾಮಸ್ ಕಟ್ಟೆ ಸಂಚರಿಸುವ ರಸ್ತೆಯ ಪಾಂಪೈ ಕಾಲೇಜು ಸಮೀಪದಲ್ಲಿ ಬುಧವಾರ ಸಂಜೆ ಸುಮಾರು 7ಕ್ಕೆ ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜಾ ಕಾರಿನಲ್ಲಿ ಸಂಚರಿಸುವ ಸಂದರ್ಭ ಚಿರತೆಯೊಂದು ರಸ್ತೆ ದಾಟುದನ್ನು ನೋಡಿದ್ದು, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಹೇಳಿದ್ದಾರೆ. ಕಿನ್ನಿಗೋಳಿ ಐಕಳ, ಕೊಲ್ಲೂರು ಪದವು ಭಾಗದಲ್ಲಿ ಹಲವು ಬಾರಿ ಹಲವು ಕಡೆಗಳಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಸ್ಥಳೀಯರಲ್ಲಿ ಮತ್ತೆ ಭಯಭೀತ ವಾತಾವರಣ ಸೃಷ್ಟಿಯಾಗಿದೆ.
Next Story





