ಮುಲ್ಕಿ-ಮೂಡಬಿದಿರೆ ತಾಲೂಕು ಮಟ್ಟದ ದಫ್ ಸ್ಪರ್ಧೆ : ಶಿರ್ತಾಡಿಯ ದಾರುಸ್ಸಲವಾತ್ ಮಕ್ಕಿ ದಫ್ ತಂಡ ಪ್ರಥಮ

ಮಂಗಳೂರು, ಡಿ.22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹಮ್ಮಿಕೊಂಡಿದ್ದ ಮುಲ್ಕಿ, ಮೂಡುಬಿದಿರೆ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ಶಿರ್ತಾಡಿಯ ದಾರುಸ್ಸಲವಾತ್ ಮಕ್ಕಿ ದಫ್ ತಂಡ ಪ್ರಥಮ ಮತ್ತು ತೋಡಾರಿನ ಶೈಕ್ ಜೀಲಾನಿ ದಫ್ ತಂಡ ದ್ವಿತೀಯ ಸ್ಥಾನ ಪಡೆದು ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆಗೆ ಆಯ್ಕೆಯಾಗಿವೆ.
ಸ್ಪರ್ಧೆಯ ತೀರ್ಪುಗಾರರಾಗಿ ಆರ್.ಕೆ. ಮದನಿ ಅಮ್ಮೆಂಬಳ ಮತ್ತು ಹಾರಿಸ್ ಮದನಿ ಪಾಟ್ರಕೋಡಿ ಸಹಕರಿಸಿದರು.
ಮೂಡಬಿದಿರೆಯ ಹಂಡೇಲು ಮುಹ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ಮಸೀದಿಯ ಖತೀಬ್ ಇಬ್ರಾಹಿಂ ದಾರಿಮಿ ಉದ್ಘಾಟಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮಸೀದಿಯ ಅಧ್ಯಕ್ಷ ಎಚ್.ಎಂ. ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಹಂಡೇಲ್, ಉಪಾಧ್ಯಕ್ಷ ಮಯ್ಯದ್ದಿ ಹಂಡೇಲ್, ಕೋಶಾಧಿಕಾರಿ ಅಬೂಬಕರ್, ಪುತ್ತಿಗೆ ಜುಮಾ ಮಸೀದಿಯ ಖತೀಬ್ ಜಾಫರ್ ಫೈಝಿ, ಜೀಲಾನಿ ಯೂತ್ ಅಸೋಸಿಯೇಶನ್ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಫಿರೋಝ್, ಸಾಮಾಜಿಕ ಕಾರ್ಯಕರ್ತ ಸಲೀಂ ಹಂಡೇಲ್ ಭಾಗವಹಿಸಿದ್ದರು.





