ಮುಲ್ಕಿ: ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾಕೂಟ

ಮುಲ್ಕಿ: ಶಾಫಿ ಜುಮಾ ಮಸೀದಿ ಕೆ.ಎಸ್. ರಾವ್ ನಗರ ಕೊಲ್ನಾಡು ಮುಲ್ಕಿ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾಕೂಟವು ಶಾಫಿ ಜುಮಾ ಮಸೀದಿಯ ವಠಾರದಲ್ಲಿ ರವಿವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಲ್ಕಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ವಿದ್ಯಾದರ ಡಿ. ಬೈಕರಿಕರ್, ಕರ್ನಾಟಕ ರಾಜ್ಯವನ್ನು ಮಾದಕ ವ್ಯಸನ ಮುಕ್ತವಾಗಿಸುವ ಪಣವನ್ನು ತೊಡಲಾಗಿದೆ. ಮಾದಕ ವ್ಯಸನಗಳನ್ನು ಮಾರಾಟ ಮಾಡುವವರು ಯಾರೂ ಅದರ ದಾಸರಾಗಿರುವುದಿಲ್ಲ. ನಮ್ಮ ಯುವ ಸಮುದಾಯ ಇದರ ದಾಸರಾಗುತ್ತಿರುವುದು ಖೇದಕರ. ಶಿಕ್ಷಣಕ್ಕೆ ಎಲ್ಲಾ ಅನಿಷ್ಟಗಳನ್ನು ಮೆಟ್ಟಿ ನಿಲ್ಲುವ ತಾಕತ್ತುಇದೆ. ಆದ್ದರಿಂದ ಯುವಕರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ನುಡಿದರು.
ಸಮಾರಂಭವನ್ನು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಶಾಫಿ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ ಅವರು ದುವಾ ಆಶೀರ್ವಚನೆ ಗೈದರು. ಸಮಾರಂಭದ ಅಧ್ಯಕ್ಷತೆವಹಿಸಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಎಂ.ಇ. ಮುಹಮ್ಮದ್ ಹನೀಫ್ ಮಾತನಾಡಿದರು.
ಇದೇ ಸಂದರ್ಭ ಜ.28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ "ಸಮಸ್ತ 100 ಉದ್ಘಾಟನಾ ಸಮ್ಮೇಳನ"ದ ಪೋಸ್ಟರನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್, ಲೀಕೋಪಯೋಗಿ ಇಲಾಖೆಯ ಲೆಕ್ಕ ಪರಿಶೋಧಕರಾದ ಅಹಮದ್ ನೌಫಲ್ ಎಂ. ಶಾಫಿ ಜುಮಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎ.ಎಚ್. ರಫೀಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕೆ.ಎಸ್. ರಾವ್ ನಗರದ ಯುವಕ ವೃಂದದ ಅಧ್ಯಕ್ಷ ಮುಹಮ್ಮದ್ ಅಲಿ ಅತ್ರಾಡಿ, ಉದ್ಯಮಿ ಹಾಜಿ ಹಸನಬ್ಬ, ಸಿವಿಲ್ ಕಾಂಟ್ರಾಕ್ಟರ್ ಯಾಕೂಬ್ ಕೊಲ್ನಾಡು, ಯನೈಟೆಡ್ ಕಾರ್ಸ್ ಮೂಡಬಿದ್ರೆಯ ಮಾಲಕ ಅಬ್ದುಲ್ ರಝಾಕ್, ಉದ್ಯಮಿಗಳಾದ ಅನ್ವರ್ ಬಜಲ್, ಶರೀಫ್ ಮೂಡಬಿದ್ರೆ, ಯು.ಕೆ. ಗ್ರೂಪ್ ಸಂಸ್ಥೆಯ ಮಾಲಕ ಯು.ಕೆ. ಇಲ್ಯಾಸ್, ನಝೀರ್, ಎ.ಎಚ್. ಶಮೀರ್, ಮುಹಮ್ಮದ್ ಇಮ್ರಾನ್ ಕೊಲ್ನಾಡು, ಮುಹಮ್ಮದ್ ಸಿರಾಜ್ ಮುಲ್ಕಿ, ದಾರುಲ್ ಫೌಝ್ ರಿಫರ್ಮ್ ಸ್ಥಾಪಕಾಧ್ಯಕ್ಷ ಮುಹಮ್ಮದ್ ಶಾಝ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಕಾರ್ನಾಡ್, ದಾರುಲ್ ಫೌಝ್ ರಿಫರ್ಮ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಂಶೀರ್ ಎಣ್ಣೆಹೊಳೆ, ಶಾಫಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಎಂ.ಕೆ. ಮುಸ್ತಫಾ, ಅಹಮದ್ ಬಾವಾ, ಉಪಾಧ್ಯಕ್ಷರಾದ ಅಹಮದ್ ಬಶೀರ್, ಮುಲ್ಕಿ ನಗರ ಪಂಚಾಯತ್ ಮಾಜಿ ಸದಸ್ಯ ಬಶೀರ್ ಕುಳಾಯಿ, ನಾಸಿರ್ ಎ.ಎಚ್. ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಘಟಕಾಧ್ಯಕ್ಷ ಎಂ. ಇಸ್ಮಾಯೀಲ್, ದಫ್ ಉಸ್ತಾದ್ ಮುಹಮ್ಮದ್ ಜವಾದ್, ಶಾಫಿ ಜುಮಾ ಮಸೀದಿಯ ಖಜಾಂಚಿ ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.
ಶಾಫಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಬೀನ್ ಎಸ್.ಎಚ್. ಕೊಲ್ನಾಡು ಸ್ವಾಗತಿಸಿ, ಧನ್ಯವಾದ ಗೈದರು. ಸಾದಿಕ್ ಕಾರ್ಯಕ್ರಮ ನಿರೂಪಿಸಿದರು.







