ಫಾ.ಮುಲ್ಲರ್ ಎಂಬಿಬಿಎಸ್ ಪದವಿ ಕಾಲೇಜಿನ ಬೆಳ್ಳಿ ಹಬ್ಬಕ್ಕೆ ಚಾಲನೆ

ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಮೂಲಕ ಹಮ್ಮಿಕೊಂಡಿದ್ದ ಫಾಧರ್ ಮುಲ್ಲರ್ ಎಂಬಿಬಿಎಸ್ ಪದವಿ ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭವನ್ನು ನಗರದ ಫಾ.ಮುಲ್ಲರ್ ಕನ್ ವೆನ್ಶನ್ ಸೆಂಟರ್ ಸಭಾಂಗಣದಲ್ಲಿಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಅತೀ.ವಂ.ಪೀಟರ್ ಪೌಲ್ ಸಲ್ದಾನರ ಅಧ್ಯಕ್ಷ ತೆಯಲ್ಲಿ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಉದ್ಘಾಟಿಸಿದರು.
ಬೆಳ್ಳಿ ಹಬ್ಬ ಆಚರಿಸುತ್ತಿರುವ ಫಾ.ಮುಲ್ಲರ್ ಎಂಬಿಬಿಎಸ್ ಸಂಸ್ಥೆಗೆ ಶುಭ ಹಾರೈಸಿದ ಡಾ.ಘಾನ ಮಾತನಾಡುತ್ತಾ, ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ವೈದ್ಯಕೀಯ ಪದವಿ ಪಡೆದಿರು ವುದು ಅವಿಸ್ಮರಣೀಯ ಅನುಭವ ನೀಡಿದೆ. ಫಾದರ್ ಮುಲ್ಲರ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸೇವಾ ಮನೋಭಾವ ವನ್ನು ಬೆಳೆಸುವ ಶ್ರೇಷ್ಠ ಸಂಸ್ಥೆ ಎಂದರು.
ಎಂಬಿಬಿಎಸ್ ಪದವಿ ಹಂತದಲ್ಲಿ ಯುವ ವೈದ್ಯರು ತಮ್ಮ ವೃತ್ತಿ ಶಿಕ್ಷಣದ ಜೊತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಲು ವಿಫುಲ ಅವಕಾಶವಿದೆ. ಕೇವಲ ರ್ಯಾಂಕ್ ಗಳಿಕೆಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರದೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಪೋಷಕರು ಸಹಾಯ ನೀಡಬೇಕು ಎಂದರು.
ವೈದ್ಯರು ತಮ್ಮ ವೃತ್ತಿಯಲ್ಲಿ ವ್ಯಕ್ತಿಯ ಆರೋಗ್ಯ ಸಮಸ್ಯೆ ಯನ್ನು ಯಶಸ್ವಿಯಾಗಿ ಪರಿಹರಿಸಿ ಆತನನ್ನು ರೋಗದಿಂದ ಗುಣಮುಖ ನಾಗುವಂತೆ ಮಾಡುವುದು ಆತನ ಶ್ರೇಷ್ಠ ಸಾಧನೆ ಎಂದು ಡಾ.ಗಾನ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಅತೀ.ವಂ.ಪೀಟರ್ ಪೌಲ್ ಸಲ್ದಾನ ಮಾತನಾಡುತ್ತಾ, ಫಾದರ್ ಮುಲ್ಲರ್ ಸಂಸ್ಥೆ ತನ್ನ ಗುಣಮಟ್ಟದ ವೈದ್ಯಕೀಯ ಸೇವೆ ಮೂಲಕ ಜಾಗತಿಕ ಮಟ್ಟದ ಖ್ಯಾತಿ ಗಳಿಸಿದೆ. ಆರಂಭದಲ್ಲಿ ಕುಷ್ಠ ರೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸ್ಥೆಯೂ ಬಳಿಕ ವಿವಿಧ ವೈದ್ಯಕೀಯ ಶಿಕ್ಷಣದ ಜೊತೆಗೆ ನರ್ಸಿಂಗ್ ಕಾಲೇಜು ಗಳನ್ನು ನಡೆಸುತ್ತಾ ಬಂದಿದೆ. ಸಂಸ್ಥೆ ಗುಣಮಟ್ಟದ ಸೇವೆ,ನೈತಿಕ ಮೌಲ್ಯಗಳ ಜೊತೆ ಪಾರದರ್ಶಕ ವ್ಯವಸ್ಥೆಯ ಮೂಲಕ ಜನರ ವಿಶ್ವಾಸ ಕ್ಕೆ ಪಾತ್ರವಾಗಿದೆ.
ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ಕಲಿಯುವ ಕುತೂಹಲ ಇರಬೇಕು. ಇದರಿಂದ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಫಾದರ್ ಮುಲ್ಲರ್ ಸಂಸ್ಥೆಯ ಮೂಲಕ ಕಲಿತು ಸೇವೆ ಸಲ್ಲಿಸುತ್ತಿರುವ ಯುವ ವೈದ್ಯರೇ ಸಂಸ್ಥೆಯ ರಾಯಬಾರಿಗಳಾಗಿದ್ದಾರೆ ಎಂದು ಬೆಳ್ಳಿ ಹಬ್ಬ ದ ಸಂದರ್ಭದಲ್ಲಿ ಶುಭ ಹಾರೈಸಿದರು.
ತುಂಬೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಆಂಟನಿ ಸಿಲ್ವನ್ ಡಿ ಸೋಜ ಅವರು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮ ಗಳ ಬಗ್ಗೆ ತಿಳಿಸುತ್ತಾ, ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳಲ್ಲಿ ಹೊಸ ವೈದ್ಯಕೀಯ ಕೋರ್ಸ್ ಗಳ ಸೇರ್ಪಡೆ, ಹಾಸ್ಟೆಲ್ ಮತ್ತು ಅತಿಥಿ ಗೃಹ, ವಿವಿಧ ಸಂಸ್ಥೆ ಗಳ ಸಹಯೋಗದಲ್ಲಿ ವಿಚಾರ ಸಂಕಿರಣ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.ಸುಮಾರು 25 ಸಾವಿರ ಸಾರ್ವಜನಿಕರಿಗೆ ತುರ್ತು ಸಂದರ್ಭ ದಲ್ಲಿ ಸಹಾಯ ವಾಗುವ ಜೀವ ರಕ್ಷಣಾ ಪ್ರಥಮ ಚಿಕಿತ್ಸೆ (ಸಿಪಿಆರ್) ಬಗ್ಗೆ ಉಚಿತ ತರಬೇತಿ ಸೇರಿದಂತೆ ವಿವಿಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸ್ವಾಗತಿಸಿದರು.
ಸಮಾರಂಭದಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತ್ ಮಿನೇಜಸ್, ವಿನ್ಸೆಂಟ್ ಸಿಲ್ವೇಸ್ಟ್ ರ್ ಲೋಬೊ,ಜೀವನ್ ಸಿಕ್ವೇರಾ, ಡಾ.ಉದಯ ಕುಮಾರ್, ಡಾ.ಪ್ರಭು ಕಿರಣ್, ಡಾ.ಹೀಲ್ಡಾ, ಜೆಸಿಂತಾ, ಡಾ,ಚರಿಷ್ಮಾ, ಮೊದಲಾದವರು ಉಪಸ್ಥಿತರಿದ್ದರು.







