ಡಿಕೆಎಸ್‌ಸಿ ಜುಬೈಲ್ ಘಟಕದ ಅಧ್ಯಕ್ಷರಾಗಿ ಮುಸ್ತಫಾ ಮೈನ ಆಯ್ಕೆ

ಮಂಗಳೂರು,ಫೆ.2:ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಜುಬೈಲ್ ಘಟಕದ ಮಹಾಸಭೆಯು ಅಧ್ಯಕ್ಷ ಮುಹಮ್ಮದ್ ಅಲಿ ಕೃಷ್ಣಾಪುರ ಅವರ ಅಧ್ಯಕ್ಷತೆಯಲ್ಲಿ ಜುಬೈಲ್‌ನಲ್ಲಿ ಜರಗಿತು.
ಜಾಫರ್ ಮುಂಡ್ಕೂರ್ ವಾರ್ಷಿಕ ವರದಿ ಹಾಗೂ ಹಣಕಾಸು ಕಾರ್ಯದರ್ಶಿ ಅನ್ವರ್ ಪಡುಬಿದ್ರಿ ಲೆಕ್ಕಪತ್ರ ಮಂಡಿಸಿ ದರು. ಡಿಕೆಎಸ್‌ಸಿ ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮುಸ್ತಫಾ ಮೈನ, ಉಪಾಧ್ಯಕ್ಷರಾಗಿ ಅನ್ವರ್ ಪಡುಬಿದ್ರೆ, ಜಾಫರ್ ಮುಂಡ್ಕೂರ್, ಪ್ರಧಾನ ಕಾರ್ಯ ದರ್ಶಿಯಾಗಿ ಮುಹಮ್ಮದ್ ಮುಸ್ತಫ ಹೊಸನಗರ, ಕಾರ್ಯದರ್ಶಿಗಳಾಗಿ ಅಬ್ದುಲ್ ಹಕೀಮ್ ನೆಕ್ಕರೆ, ಉಬೈದ್ ಸುರಿಬೈಲ್, ಯಹ್ಯಾ ಕೆಸಿ ರೊಡ್, ಹಣಕಾಸು ಕಾರ್ಯದರ್ಶಿಯಾಗಿ ಶಮೀರ್ ಪಲಿಮಾರ್, ಸಮಿತಿಯ ಅಭಿವೃದ್ಧಿ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಕೃಷ್ಣಾಪುರ, ಸಂವಹನ ಕಾರ್ಯದರ್ಶಿಯಾಗಿ ಅಶ್ರಫ್ ನಾಳ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಸಲಹೆಗಾರರನ್ನಾಗಿ ಕೆ ಎಚ್. ರಫೀಕ್ ಸೂರಿಂಜೆ, ಸುಲೈಮಾನ್ ಮಿಲನ್ ಸೂರಿಂಜೆ, ಅಬ್ದುಲ್ ಹಮೀದ್ ಉಳ್ಳಾಲ್, ಅಬ್ದುಲ್ ಹಮೀದ್ ಕಾಪು, ಅಬ್ದುಲ್ ಕರೀಂ ಪಾಣೆಮಂಗಳೂರು, ಹಾತಿಂ ಕೂಳೂರು, ಅಬೂಬಕ್ಕರ್ ಬರ್ವ, ಇಕ್ಬಾಲ್ ಮಲ್ಲೂರ್ ಆಯ್ಕೆ ಮಾಡಲಾಯಿತು.
ಡಿಕೆಎಸ್‌ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ಜುಬೈಲ್ ಉಸ್ತುವಾರಿ ಉಸ್ಮಾನ್ ಹೊಸಂಗಡಿ, ಜುಬೈಲ್ ಯೂತ್‌ವಿಂಗ್ ಸಾಮಿತ್ ಪಡುಬಿದ್ರಿ, ದಮ್ಮಾಂ ಘಟಕದ ಅಧ್ಯಕ್ಷ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ತುಖ್ಬ ಘಟಕದ ಅಧ್ಯಕ್ಷ ಜೆಪ್ಪುಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ಡಿಕೆಎಸ್‌ಸಿ ಕೇಂದ್ರ ಸಮಿತಿಯ ದಾಯಿ ಅಬ್ದುರ‌್ರಶೀದ್ ಸಅದಿ ದುಆಗೈದರು. ಡಿಕೆಎಸ್‌ಸಿ ದಮ್ಮಾಂ ವಲಯ ಸಂಘಟಕ ಝುಬೈರ್ ಸಖಾಫಿ ಕಿರಾಅತ್ ಪಠಿಸಿದರು. ಅನ್ವರ್ ಪಡುಬಿದ್ರಿ ಸ್ವಾಗತಿಸಿದರು. ಶಾಫಿ ಶುಐಬ್ ವಂದಿಸಿದರು.







