ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಬಂಟ್ವಾಳ : ಮಾರ್ನಬೈಲ್ ನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್. ಕೆಂಪೇಗೌಡರು ಕನ್ನಡ ನಾಡು, ನುಡಿ, ಆಡಳಿತ ಸಾರ್ವಭೌಮತೆಗೆ ನೀಡಿದ ಅಪಾರ ಕೊಡುಗೆಗಳ ಬಗ್ಗೆ ವಿವರಿಸಿದರು.
ನಾಡ ಪ್ರಭು ಕೆಂಪೇಗೌಡರ ಕುರಿತು ಉಪನ್ಯಾಸಕಾರದ ಗಾಯತ್ರಿ, ಶಹನಾಜ್ ಹಾಗೂ ವಿದ್ಯಾರ್ಥಿನಿ ಸ್ವಾಬೀರ ಮಾತನಾಡಿದರು.
ಉಪ ಪ್ರಾಂಶುಪಾಲೆ ಅಂಜಲಿನ ಸುನೀತ ಪಿರೇರಾ, ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಹಸುಫಾ ಸ್ವಾಗತಿಸಿ, ಆಯಿಷಾ ಶೈಮ ಧನ್ಯವಾದವಿತ್ತರು. ಕೆ.ಪಿ.ಆಯಿಷತ್ ಸುಹಾನಾ ಹಾಗೂ ಫಾತಿಮಾ ಝೋಹರ ಕಾರ್ಯಕ್ರಮ ನಿರೂಪಿಸಿದರು.
Next Story







