'ನಮ್ಮ ಗೆಳೆಯರು ಒಕ್ಕೆತ್ತೂರು' ವತಿಯಿಂದ ಬಡ ಯುವತಿಯ ಮದುವೆ ಕಾರ್ಯಕ್ರಮ

ವಿಟ್ಲ: 'ನಮ್ಮ ಗೆಳೆಯರು ಒಕ್ಕೆತ್ತೂರು' ಎಂಬ ಹೆಸರಿನಲ್ಲಿ ಸ್ಥಳೀಯ ಉತ್ಸಾಹಿ ಯುವಕರ ಬಳಗದಿಂದ ಬಡ ಯುವತಿಯ ಮದುವೆ ಕಾರ್ಯಕ್ರಮ ನೂರ್ ಮಹಲ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
"ನಮ್ಮ ಗೆಳೆಯರು ಬಳಗ"ವು ಸಾರ್ವಜನಿಕ ರಸ್ತೆ ದುರಸ್ತಿ, ಸಾಮೂಹಿಕ ಇಫ್ತಾರ್ ಕೂಟ, ಇತ್ಯಾದಿಯಾಗಿ ಸಣ್ಣಪುಟ್ಟ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆದು, ಇದೀಗ ಇದರ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಬಡ ಯುವತಿಯ ವಿವಾಹ ಆಯೋಜನೆಯನ್ನು ನೆರವೇರಿಸಿದೆ. ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯ ಮಾಜಿ ಖತೀಬ್ ಅಬ್ದುಲ್ಲಾ ಮದನಿ ಅಧ್ಯಕ್ಷತೆ ವಹಿಸಿದ್ದರು. ವಾಲೆಮುಂಡೋವು ಉಸ್ತಾದ್ ಎಂದೇ ಪ್ರಸಿದ್ಧರಾಗಿರುವ ಶೈಖುನಾ ಮಹಮೂದ್ ಫೈಝಿ ದುವಾ ಪ್ರಾರ್ಥನೆ ಮಾಡುವ ಮೂಲಕ, ಒಕ್ಕೆತ್ತೂರು ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಇಬ್ರಾಹಿಂ ಕಾಮಿಲ್ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಫೀಕ್ ಅಹ್ಸನಿ, ಅಬೂಬಕರ್ ಸಖಾಫಿ ಮಾಡಾವು, ಅಶ್ರಫ್ ಸಖಾಫಿ ಅಲ್ ಮಹ್ಲರಿ, ಮಹಮ್ಮದ್ ಅಲಿ ಇರ್ಫಾನಿ ಫೈಝಿ, ಆರಿಫ್ ಬಾಖವಿ, ಅಬ್ಬಾಸ್ ಮದನಿ, ಯೂಸುಫ್ ಮದನಿ, ರಶೀದ್ ಸುರೈಝಿ ಸಖಾಫಿ, ವಿ.ಎಂ.ಅಶ್ರಫ್, ಶಾಕಿರ್ ಅಳಕೆಮಜಲು, ಮುಹಮ್ಮದ್ ಅಶ್ರಫ್ ಪೊನ್ನೋಟು, ಎಮ್ ಎಸ್ ಮುಹಮ್ಮದ್, ಬಶೀರ್ ನಬಾ, ಕರೀಮ್ ಕಂಪದಬೈಲು, ಡಿ .ಬಿ.ಅಬೂಬಕರ್, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ವಿ.ಎಸ್ ಸುಲೈಮಾನ್, ಮಹಮ್ಮದ್ ಸಿದ್ದೀಕ್, ತೌಸೀಫ್ ಎಂ. ಜಿ. ಇಸ್ಮಾಯಿಲ್ ಮಾಸ್ಟರ್ ಹಾಗೂ ಸಫ್ವಾನ್ ವೇದಿಕೆಯಲ್ಲಿದ್ದರು.
ಇಸ್ಮಾಯಿಲ್ ಸೂಪರ್ ಸ್ವಾಗತಿಸಿದರು ಹಾಗೂ ಅಬ್ದುಲ್ ಲತೀಫ್ ಕೊಡಂಗೆ ವಂದಿಸಿದರು. ಸ್ವಾದಿಕ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.







