ನಾಸಿರ್ ಲಕ್ಕಿ ಸ್ಟಾರ್ ವಿರುದ್ಧ ಮಾನಹಾನಿಕರ ಹೇಳಿಕೆ; ದೂರು ದಾಖಲು

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ವಖ್ಫ್ ಚೇರ್ಮ್ಯಾನ್ ಲಕ್ಕಿ ಸ್ಟಾರ್ ನಾಸಿರ್ ಅವರ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿರುವ ಘಟನೆಗೆ ಸಂಬಂಧಿಸಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಮೊಯಿದಿನ್ ಬಾವ ಅಭಿಮಾನಿ ಬಳಗ ಹಾಗೂ ಇತರ ಅವರ ಫ್ಯಾನ್ಸ್ ಕ್ಲಬ್ ಗ್ರೂಪ್ ಗಳಲ್ಲಿ ಕೆ. ಮೊಹಮ್ಮದ್ ಸಿನಾನ್ ಎಂಬಾತ ಅವಹೇಳನಕಾರಿ ಹಾಗೂ ಮಾನ ಹಾನಿಕರ ಹೇಳಿಕೆ ಬರೆದು ಹರಿಯ ಬಿಟ್ಟಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಸಿರ್ ಲಕ್ಕಿ ಸ್ಟಾರ್ ರವರು ಪಣಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ ಎಂದು ತಿಳಿದು ಬಂದಿದೆ.
Next Story





