ʼರಾಷ್ಟ್ರೀಯ ಶಿಕ್ಷಣ ನೀತಿ 2020ʼ ರಾಜ್ಯದಲ್ಲಿ ಉಳಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಮಂಗಳೂರು: ರಾಜ್ಯದಲ್ಲಿ ʼರಾಷ್ಟ್ರೀಯ ಶಿಕ್ಷಣ ನೀತಿ 2020ʼನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ನಗರದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ʼರಾಷ್ಟ್ರೀಯ ಶಿಕ್ಷಣ ನೀತಿ 2020ʼ ಶಿಕ್ಷಣ ತಜ್ಞರ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶ ಮತ್ತು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಅಂತರಾಷ್ಟ್ರೀ ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಪೈಪೋಟಿ ಯನ್ನು ಎದುರಿಸಲು ಭವಿಷ್ಯದಲ್ಲಿ ಪೂರಕವಾಗುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದನ್ನು ರದ್ದುಗೊಳಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವುದು ರಾಜಕೀಯ ದ್ವೇಷದ ಸಾಧನೆಗಾಗಿ ಹೊರಟಂತಿದೆ. ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ರಾಜಕಾರಣ ಸರಿಯಲ್ಲ. ಹಿಂದಿನ ಶಿಕ್ಷಣದಲ್ಲಿ ಕ್ರಿಯೇಟಿವಿಟಿಗೆ ಅವಕಾಶ ಇರಲಿಲ್ಲ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳ ಕ್ರೀಯಾಶೀಲತೆಗೆ ಹೆಚ್ಚಿನ ಅವಕಾಶ ಇದೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.
ಶಿಕ್ಷಣ ದಲ್ಲಿ ರಾಜ್ಯಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಇರುವ ಮಂಗಳೂರಿನಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ತಪ್ಪು ಗಳಿದ್ದರೆ ಸರಿಪಡಿಸಿ ಮುಂದುವರಿಯುವಂತಾಗಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಶಿಕ್ಷಣ ತಜ್ಞ ರವೀಂದ್ರ ರೇಶ್ಮೆ ಮಾತನಾಡುತ್ತಾ, ಶಿಕ್ಷಣ ವೃತ್ತಿ ಮತ್ತು ಶಿಕ್ಷಣ ನೀತಿಗೂ ಸಂಬಂಧ ಇಲ್ಲದೆ ಇದ್ದ ಕಾಲಘಟ್ಟ ದಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಸಾಕಷ್ಟು ಸುಧಾರಣೆ ಯನ್ನು ತರುವ ಉದ್ದೇಶ ವನ್ನು ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ವಿಷಯವಾಗಿ ಚರ್ಚೆ ಯಾಗಬೇಕಿತ್ತು ಆದರೆ ಅದನ್ನು ರದ್ದು ಗೊಳಿಸುವ ಪ್ರಸ್ತಾಪ ರಾಷ್ಟ್ರೀಯ ಶಿಕ್ಷಣ ನೀತಿಗೆ ಕಂಟಕಪ್ರಾಯವಾಗಿದೆ. ದೇಶದಲ್ಲಿ ಸಂವಿಧಾನ ರಚನೆಯ ಪೂರ್ವ ದಲ್ಲಿ ಡಾ.ರಾಧಾಕೃಷ್ಣ ನ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಲಾಲ್ ಬಹುದ್ದೂರ್ ಶಾಸ್ತ್ರೀಯ ವರ ಕಾಲದಲ್ಲಿ ತಜ್ಞರ ಮೂಲಕ ರೂಪಿಸಿದ ಸಮಿತಿ ಪರಿಷ್ಕೃತ ನೀತಿಯನ್ನು ಜಾರಿ ಮಾಡಿದೆ. ದಿ.ರಾಜೀವ್ ಗಾಂಧಿಯವರಿಗೂ ಶಿಕ್ಷಣ ಕ್ಷೇತ್ರದ ಅಸಮಾನತೆ ತೊಡೆದು ಹಾಕುವ ಚಿಂತನೆ ಮಾಡಿದ್ದಾರೆ. ನರೇಂದ್ರ ಮೋದಿ ಜಾಗತಿಕ ಗುಣಮಟ್ಟದ ಶಿಕ್ಷಣ ನೀತಿ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರೂಪಿಸಿದ್ದಾರೆ. ಶಿಕ್ಷಣ ದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿರುವವರು ಹೆಚ್ಚು ಕಾಳಜಿ ವಹಿಸಬೇಕು ಎಂದು ರವೀಂದ್ರ ರೇಶ್ಮೆ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಡಾ.ಗೌರೀಶ್, ಅರುಣ್ ಶಹಾಪುರ, ರಾಜಶೇಖರ ಹೆಬ್ಬಾರ್, ರಮೇಶ್ ಉಪಸ್ಥಿತರಿದ್ದರು. ಎಂ.ಬಿ.ಪುರಾಣಿಕ್ ಅಧ್ಯಕ್ಷ ತೆ ವಹಿಸಿದ್ದರು.







