ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ "ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ" ಆರಂಭ

ಮಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಸಹಯೋಗದೊಂದಿಗೆ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ʼರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹʼ ಡಿಸೆಂಬರ್ 15ರಿಂದ ವಿವಿಧ ಜಾಗೃತಿ ಹಾಗೂ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಆರಂಭವಾಯಿತು.
ಇಂಧನ ಜಾಗೃತಿ ಫಲಕ ಅಭಿಯಾನ ಹಾಗೂ ಭಿತ್ತಿಪತ್ರ ತಯಾರಿಕಾ ಸ್ಪರ್ಧೆಯೊಂದಿಗೆ ಸಪ್ತಾಹಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಸ್.ಐ. ಮಂಝೂರ್ ಬಾಷಾ, ಇಂಧನ ದಕ್ಷ ತಂತ್ರಜ್ಞಾನಗಳನ್ನು ಉತ್ತೇಜಿಸುವಲ್ಲಿ ಮತ್ತು ಯುವ ಮನಸ್ಸುಗಳಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರಗಳ ಬಗ್ಗೆ ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಡಾ.ಅಬ್ದುಲ್ಲಾ ಗುಬ್ಬಿ ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಝಝೀರ್ ಅಹ್ಮದ್ ನಿರೂಪಿಸಿದರು. ಸಿಎಸ್‌ಇ ವಿಭಾಗದ ಪ್ರೊ.ಸಿನಾನ್ ವಂದಿಸಿದರು.
ಆಚರಣೆಯ ಭಾಗವಾಗಿ ಡಿಸೆಂಬರ್ 18ರಂದು ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಪರಿಣತರಾದ ಡಾ.ಕಮಲಕಣ್ಣನ್ ಸಿ ಅವರು, ಸುಸ್ಥಿರ ಇಂಧನ ವ್ಯವಸ್ಥೆಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಡಿಸೆಂಬರ್ 18ರಂದು ಇಂಧನ ಸಂರಕ್ಷಣೆ ಉದ್ದೇಶದಿಂದ ವಾಕಥಾನ್ ಅನ್ನು ಆಯೋಜಿಸಲಾಯಿತು. ವಾಕಥಾನ್ ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಇಂಧನ ಸಂರಕ್ಷಣೆ ಹಾಗೂ ಪರಿಸರ ಜವಾಬ್ದಾರಿಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸಂದೇಶವನ್ನು ನೀಡಿದರು.
ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಚಟುವಟಿಕೆಗಳು ಈ ಕೆಳಗಿನಂತಿವೆ:
ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಕುರಿತು ಭಾಷಣ ಸ್ಪರ್ಧೆ
ಇಂಧನ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನದ ಕುರಿತು ಚರ್ಚೆ
ಇಂಧನ ನವೋತ್ಪಾದನಾ ಯೋಜನಾ ಪ್ರದರ್ಶನ
ಪರಿಸರ ನವೋತ್ಪಾದನಾ ಸವಾಲು: ತ್ಯಾಜ್ಯದಿಂದ ಉತ್ತಮ ಫಲಿತಾಂಶ
ಗ್ರೀನ್ ವಿಷನ್ ಸ್ಕೆಚಿಂಗ್ ಅಭಿಯಾನ
ಒಂದು ನಿಮಿಷದ ಇಂಧನ ಜಾಗೃತಿ ವೀಡಿಯೊ ಅಭಿಯಾನ
ಇಂಧನ ಸಂರಕ್ಷಣೆ ಕುರಿತು ಡಿಜಿಟಲ್ ಪೋಸ್ಟರ್ ವಿನ್ಯಾಸ ಸ್ಪರ್ಧೆ
ಇಂಧನ ಜಾಗೃತಿ ಫಲಕ ಅಭಿಯಾನ







