ರಾಷ್ಟ್ರ ಮಟ್ಟದ ಆಸ್ಟ್ರಲ್ ಪೇಜಂಟ್ಸ್ ಗ್ರ್ಯಾಂಡ್ ಫಿನಾಲೆ: ಮಂಗಳೂರಿನ ಆದಿಶ್ ಪ್ರಥಮ

ಮಂಗಳೂರು: ಬೆಂಗಳೂರು ವಿದ್ಯಾರಣ್ಯ ಪುರದ ಕಿಂಗ್ಸ್ ಮೇಯಾಡಿಸ್ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಮಿಸ್ ಆ್ಯಂಡ್ ಮಿಸಸ್ ಇಂಡಿಯಾ ಆಸ್ಟ್ರಲ್ ಪೇಜಂಟ್ಸ್ - 2025ರ 9ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ಆದಿಶ್ (5) ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮೂರು ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಧ್ವೆ ಮಾಡಲಿಂಗ್ ಬಲ್ಲಾಳ್ ಬಾಗ್ ದೀಪಕ್ ಗಂಗೂಲಿ ಇವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ್ದಾರೆ.
ವಿಜೇತ ಆದಿಶ್ ನಗರದ ಅಜಿತ್ ಮತ್ತು ಮಂಜುಶ ದಂಪತಿಯ ಪುತ್ರ, ಮಂಗಳೂರಿನ ಕ್ಯಾರ್ಮೆಲ್ ಶಾಲೆಯ ಯುಕೆಜಿ ವಿದ್ಯಾರ್ಥಿ.
Next Story





