ರಾಷ್ಟ್ರಮಟ್ಟದ 'ಆಟೋ ಎಕ್ಸ್' ರ‍್ಯಾಲಿ, ಮೋಟಾರ್ ಸ್ಪೋರ್ಟ್ಸ್‌ಗೆ ಚಾಲನೆ

ಮೂಡುಬಿದಿರೆ: ತ್ರಿಭುವನ್ ಆಟೋಮೋಟಿವ್ ಕ್ಲಬ್ ಮತ್ತು ಬೆದ್ರ ಅಡ್ವೆಂಚರಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ, ಐಎಂಎಸ್‌ಸಿ ಮೋಟಾರ್ ಸ್ಪೋರ್ಟ್ಸ್ ಹಾಗೂ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ಆಯೋಜಿಸಲಾದ ಚತುಶ್ಚಕ್ರ ಹಾಗೂ ದ್ವಿಚಕ್ರ ವಾಹನಗಳ ರಾಷ್ಟ್ರಮಟ್ಟದ `ಆಟೋ ಎಕ್ಸ್' ರ‍್ಯಾಲಿ ಹಾಗೂ ಮೋಟಾರ್ ಸ್ಪೋರ್ಟ್ಸ್‌ಗೆ ರವಿವಾರ ನಡೆಯಿತು.
ಚೌಟರ ಅರಮನೆಯ ಕುಲದೀಪ್ ಎಂ. ಹಾಗೂ ಉದ್ಯಮಿ, ರ‍್ಯಾಲಿ ನಡೆಸಲು ಮೈದಾನ ನೀಡಿದ ತಿಮ್ಮಯ್ಯ ಶೆಟ್ಟಿ ಅವರು ರ‍್ಯಾಲಿಗೆ ಅಧಿಕೃತ ಚಾಲನೆ ನೀಡಿ ಶುಭ ಹಾರೈ ಸಿದರು.
ಕ್ರೀಡಾ ಇಲಾಖೆಯ ಅಧಿಕಾರಿ ಪ್ರದೀಪ್ ಡಿಸೋಜ, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಎಸ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಅಶ್ವಿನ್ ಜೆ.ಪಿರೇರಾ, ಮಹೇಂದ್ರವರ್ಮ ಜೈನ್, ಅಬು ಅಲಾ ಪುತ್ತಿಗೆ, ಕೃಷ್ಣರಾಜ್ ಹೆಗ್ಡೆ, ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿಗಳಾದ ಚಂದ್ರಶೇಖರ್ ರಾಜೆ ಅರಸ್, ಡಾ.ಎಸ್.ಎನ್ ವೆಂಕಟೇಶ್ ನಾಯಕ್, ಯೋಗೇಶ್ ಬೆಡೇಕರ್, ರೇಸಿಂಗ್ ಸಾಧಕ ಮೂಸಾ ಶರೀಫ್, ಮೂಡುಬಿದಿರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಸಹಿತ ಗಣ್ಯರಿದ್ದರು.
ರ‍್ಯಾಲಿ ಆಯೋಜನೆಯ ಪ್ರಮುಖರಾದ ಅಕ್ಷಯ್ ಜೈನ್, ಪ್ರತಾಪ್ ಕುಮಾರ್, ಧೀರಜ್ ಕೊಳಕೆ, ಚೆಂಗಪ್ಪ, ಸಿ.ಎಚ್.ಗಫೂರ್, ಯತಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







