ಪುತ್ತೂರು| ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ : ತನ್ಹ ಫಾತಿಮಾ, ತಾನಿಷ್ ಮುಹಮ್ಮದ್‌ಗೆ ಚಿನ್ನದ ಪದಕ

ಪುತ್ತೂರು, ನ. 24: ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಾದ ತನ್ಹ ಫಾತಿಮಾ ಮತ್ತು ತಾನಿಷ್ ಮುಹಮ್ಮದ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇಸ್ಮಾಯಿಲ್ ಶಾಫಿ ಕಾವು ಹಾಗೂ ತಹಸೀನ್ ದಂಪತಿಯ ಮಕ್ಕಳಾದ ಇವರು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇವರಿಗೆ ಸೆನ್ಸಾಯಿ ನಾರಾಯಣ ಆಚಾರ್ಯ ಮಳಿ ಕಾವು ತರಬೇತಿ ನೀಡಿದ್ದರು.
Next Story





