ಉಳ್ಳಾಲ ನಗರಸಭೆಯ ನೂತನ ಪೌರಾಯುಕ್ತ ನವೀನ್ ಹೆಗ್ಡೆ ಅಧಿಕಾರ ಸ್ವೀಕಾರ

ಉಳ್ಳಾಲ: ನಗರಸಭೆಯ ನೂತನ ಪೌರಾಯುಕ್ತರಾಗಿ ನೇಮಕಗೊಂಡ ನಗರ ಸಭೆ ಕಂದಾಯ ಅಧಿಕಾರಿ ಆಗಿದ್ದ ನವೀನ್ ಹೆಗ್ಡೆ ಸೋಮವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮನ ಪ್ರಭಾರ ಪೌರಾಯುಕ್ತ ಮತ್ತಡಿಯವರು ನವೀನ್ ಹೆಗ್ಡೆಯವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಪೌರಾಯುಕ್ತರಿಗೆ ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ರಫ್, ಕೌನ್ಸಿಲರ್ ಗಳಾದ ಖಲೀಲ್, ಕಂದಾಯ ನಿರೀಕ್ಷಕ ಚಂದ್ರಹಾಸ, ಕಿರಿಯ ಅಭಿಯಂತರ ತುಳಸಿ ದಾಸ್, ಸಮುದಾಯ ಸಂಘಟಕ ರೋಹಿನಾಥ್ ಸಹಿತ ಸಿಬ್ಬಂದಿ ವರ್ಗ ಹೂಗುಚ್ಚ ನೀಡಿ ಸ್ವಾಗತಿಸಿದರು.
Next Story





