ನೇರಳಕಟ್ಟೆ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಮಾಣಿ ಸಮೀಪದ ನೇರಳೆಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮಶಾಲೆಯ ಉರ್ದಿಲಗುತ್ತು ಕೆ.ಇಂದುಹಾಸ ರೈ ಸಭಾಂಗಣದಲ್ಲಿ ನಡೆಯಿತು.
ಅಮೆರೀಕಾದಲ್ಲಿ ವಾಸವಾಗಿದ್ದು ಊರಿನ ಶಾಲೆಯ ಮೇಲೆ ಅಪಾರ ಗೌರವ ಹೊಂದಿರುವ ಉರ್ದಿಲ ಗುತ್ತು ರಾಮಪ್ರಸಾದ್ ರೈ ಅವರ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ನಡೆದ ಕಾರ್ಯಕ್ರಮವನ್ನು ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷೆ ಉರ್ದಿಲಗುತ್ತು ಲಕ್ಷ್ಮಿ ಕೆ ಹೆಗಡೆ ಉದ್ಘಾಟಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಿ.ಕೆ.ರಶೀದ್ ಪರ್ಲೊಟ್ಟು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶಾಲಾ ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ನಿರಂಜನ್ ರೈ ಕುರ್ಲೆತ್ತಿಮಾರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾರ್ಜನೆಯನ್ನು ಪಡೆದು ಈ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಿದರೆ ಪುಸ್ತಕ ದಾನಿಗಳಿಗೆ ನಾವು ಕೊಡುವ ದೊಡ್ಡ ಗೌರವವಾಗುತ್ತದೆ ಎಂದರು.
ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ, ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಎನ್.ಕೆ, ಸದಸ್ಯರಾದ ಸಾಹುಲ್ ಹಮೀದ್ ಪರ್ಲೊಟ್ಟು, ಚಂದ್ರಶೇಖರ ಪೆರಾಜೆ, ಅತಾವುಲ್ಲಾ ನೇರಳಕಟ್ಟೆ, ರಶೀದ್ ಪಂತಡ್ಕ, ಮನ್ಸೂರ್ ಹಾಜಿ ಕೊಡಾಜೆ, ಮುನೀರಾ, ವೇದಾವತಿ, ಸಕೀನಾ, ಆಯಿಷಾ, ಸೌಮ್ಯ, ಅಫ್ಸಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕಿಯರಾದ ಯಶೋಧ ಸ್ವಾಗತಿಸಿ, ಆಯಿಷಾ ವಂದಿಸಿದರು. ಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.







