ನೀವಿಯಸ್ ಮಂಗಳೂರು ಮ್ಯಾರಥಾನ್: ವಿದ್ಯಾರ್ಥಿಗಳಿಂದ ಪ್ರಚಾರ ಓಟ

ಮಂಗಳೂರು: ಮಂಗಳೂರಿನಲ್ಲಿ ನವೆಂಬರ್ 9 ರಂದು ನಡೆಯಲಿರುವ ನೀವಿಯಸ್ ಮಂಗಳೂರು ಮ್ಯಾರಥಾನ್ ಪ್ರಚಾರಕ್ಕಾಗಿ ಯೆನೆಪೋಯ ವರ್ಲ್ಡ್ ಸ್ಕೂಲ್, ನೀವಿಯಸ್ ಮಂಗಳೂರು ಮ್ಯಾರಥಾನ್ ಸಹಯೋಗದೊಂದಿಗೆ ರವಿವಾರ ಕೊಡಿಯಾಲ್‌ಬೈಲ್‌ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಬಳಿಯಿಂದ ವಿದ್ಯಾರ್ಥಿಗಳಿಂದ ಪ್ರಚಾರ ಓಟವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ 3 ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳು ಸ್ಪೂರ್ತಿದಾಯಕವಾಗಿ ಭಾಗವಹಿಸಿದರು.
ಐಜಿಪಿ ಅಮಿತ್ ಸಿಂಗ್ ಪ್ರಚಾರ ಅಭಿಯಾನಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ದಿ ಯೆನೆಪೋಯ ಶಾಲೆಯ 25 ನೇ ವಾರ್ಷಿಕೋತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.
ಯೆನೆಪೋಯ ವರ್ಲ್ಡ್ ಸ್ಕೂಲ್‌ನ ಪ್ರಾಂಶುಪಾಲ ಆಂಥೋನಿ ಜೋಸೆಫ್ ಮತ್ತಿತರರು ಭಾಗವಹಿಸಿದ್ದರು.
Next Story







