ಇನ್ನರ್‌ವಿಲ್‌ನ ಜಿಲ್ಲಾ ಸಮಾವೇಶ ‘ಸ್ವರ್ಣ ಪರ್ಭ’

ಮಂಗಳೂರು, ಅ.3: ಇನ್ನರ್‌ವೀಲ್ ಜಿಲ್ಲೆ 318ರ ಜಿಲ್ಲಾ ರ್ಯಾಲಿ ‘ಸ್ವರ್ಣ ಪರ್ಭ ’ ರವಿವಾರ ನಗರದ ಟಿ. ವಿ. ರಮಣ ಪೈ ಹಾಲ್‌ನಲ್ಲಿ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ನೇತೃತ್ವದಲ್ಲಿ ನಡೆಯಿತು.
ಜಿಲ್ಲಾ ಖಜಾಂಚಿ ರಜನಿ.ಆರ್ ಭಟ್ , ಜಿಲ್ಲಾ ಎಡಿಟರ್ ಉಮಾ ಮಹೇಶ್ ಇನ್ನರ್‌ವೀಲ್ ಮಂಗಳೂರು ಉತ್ತರ ಕ್ಲಬ್‌ನ ಕಾರ್ಯದರ್ಶಿ ಡಾ. ಭಾರತಿ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಅಧ್ಯಕ್ಷೆ ಗೀತ. ಬಿ. ರೈ ಸ್ವಾಗತಿಸಿದರು. ರೇಲಿ ಛೇರ್ಮನ್ ಚಿತ್ರ ವಿ. ರಾವ್ ಸ್ವರ್ಣ ಪರ್ಭದ ಬಗ್ಗೆ ಪ್ರಾಸ್ತಾವಿವಾಗಿ ಮಾತನಾಡಿದರು. ಉಪ ಚೇರ್ಮನ್ ವೈಶಾಲಿ ಕುಡ್ವ ವಂದಿಸಿದರು. ಇನ್ನರ್‌ವೀಲ್ ಮಂಗಳೂರು ಉತ್ತರದ ಚಾರ್ಟರ್ ಸದಸ್ಯೆ ಉಷಾ ಪ್ರಾರ್ಥಿಸಿದರು.
ಕಾರ್ಯದರ್ಶಿ ಶಬರಿ ಕಡಿದಾಲ್ ಸಂದೇಶ ವಾಚಿಸಿದರು. ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
Next Story





