ಮುಸ್ಲಿಂ ಸೆಂಟ್ರಲ್ ಕಮಿಟಿ ಪದಾಧಿಕಾರಿಗಳಾಗಿ ನೇಮಕ

ಪುತ್ತೂರು: ಅವಿಭಜಿತ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾಗಿ ಪುತ್ತೂರಿನ ಮೂವರಿಗೆ ಅವಕಾಶ ಲಭಿಸಿದೆ. ಕಮಿಟಿಯ ಉಪಾಧ್ಯಕ್ಷರಾಗಿ ಕೆ ಪಿ ಅಹಮದ್ ಹಾಜಿ ಆಕರ್ಷಣ್, ಕಾರ್ಯದರ್ಶಿಯಾಗಿ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಗೂ ಸಂಘಟನಾ ಕಾರ್ಯ ದರ್ಶಿಯಾಗಿ ದರ್ಬೆ ಅಬ್ದುಲ್ ರಹಿಮಾನ್ ಅಝಾದ್ ಅವರನನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ ಎಸ್ ಮೊಹಮ್ಮದ್ ಮಸೂದ್ ಅವರು ನೇಮಕಗೊಳಿಸಿ ಆದೇಶಿಸಿದ್ದಾರೆ
ಪುತ್ತೂರಿನ ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ನ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಪಿ ಅಹಮದ್ ಹಾಜಿ ಅವರು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾಗಿ ನಾಲ್ಕನೇ ಬಾರಿಗೆ ನೇಮಕಗೊಂಡಿರುತ್ತಾರೆ.
ಪುತ್ತೂರಿನಲ್ಲಿ ನೋಟರಿ ನ್ಯಾಯವಾದಿಯಾಗಿರುವ ನೂರುದ್ದೀನ್ ಸಾಲ್ಮರ ಅವರು ಕೆಪಿಸಿಸಿಯ ಸಂಯೋಜಕರಾಗಿ, ಪುತ್ತೂರು ತಾಲೂಕು ಅಹಿಂದ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿಯಾಗಿ ಸತತ ಐದನೇ ಬಾರಿ ಮರು ನೇಮಕಗೊಂಡಿರುತ್ತಾರೆ.
ಸಂಘಟನಾ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕಗೊಂಡ ಅಬ್ದುಲ್ ರಹಿಮಾನ್ ಆಜಾದ್ ಅವರು ದರ್ಬೆ ಮಸ್ಜಿದ್ ಅಧ್ಯಕ್ಷರಾಗಿ, ಸೀರತ್ ಕಮಿಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.







