ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘಕ್ಕೆ ಪ್ರಶಸ್ತಿ

ಮಂಗಳೂರು, ನ.24: ವಿಶ್ವ ಮೀನುಗಾರಿಕಾ ದಿನದ ಪ್ರಯುಕ್ತ ರಾಜ್ಯ ಸರಕಾರದಿಂದ ಮೀನುಗಾರಿಕಾ ಪ್ರಾಥಮಿಕ ಸಹಕಾರಿ ಸಂಘದ ಅತ್ಯುತ್ತಮ ಸೇವೆಗೆ ನೀಡಲಾಗುವ ಪ್ರಶಸ್ತಿಯು ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘಕ್ಕೆ ಲಭಿಸಿದೆ.
ವಿದಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ನೀಡಿದರು. ಈ ಸಂದರ್ಭ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್, ಉಪಾಧ್ಯಕ್ಷ ಬಿ.ಅಹ್ಮದ್ ಬಾವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್, ನಿರ್ದೇಶಕರಾದ ಬಿ.ಇಬ್ರಾಹಿಂ ಖಲೀಲ್, ಬಿ.ಮುಹಮ್ಮದ್ ಶಾಲಿ, ಮುಹಮ್ಮದ್ ಅಶ್ರಫ್, ಎಂ.ಎ. ಗಫೂರ್, ಮುಹಮ್ಮದ್ ಮುಸ್ತಫಾ ಮಲಾರ್ ಉಪಸ್ಥಿತರಿದ್ದರು.
Next Story





