ಉಳ್ಳಾಲ: ಎಸ್ ಕೆ ಎಸ್ ಎಸ್ ಎಫ್ ದ.ಕ.ಜಿಲ್ಲಾ (ವೆಸ್ಟ್) ಮಟ್ಟದ ಬಾಲ್ಯೋತ್ಸವ ಸಮಾರೋಪ

ಉಳ್ಳಾಲ: ಎಸ್ ಕೆ ಎಸ್ ಎಸ್ ಎಫ್ ದ.ಕ.ಜಿಲ್ಲಾ ಸಮಿತಿ ವೆಸ್ಟ್ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲ್ಯೋತ್ಸವ ಸಮಾರೋಪ ಸಮಾರಂಭ ಮಂಗಳ ನಗರ ಜಾಮಿಅ ಮಸ್ಜಿದುನ್ನೂರ್ ವಠಾರಾದಲ್ಲಿ ನಡೆಯಿತು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಬಹು ಉಸ್ಮಾನ್ ಫೈಝಿ ತೋಡಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಕೆ. ಎಸ್ಎಸ್ಎಫ್ ದ.ಕ ಜಿಲ್ಲಾ ಸಮಿತಿ ವೆಸ್ಟ್ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು.
ಸ್ಥಳೀಯ ಖತೀಬ್ ಆಸೀಫ್ ಅಝ್ಹರಿ ದಿಕ್ಸೂಚಿ ಭಾಷಣ ಮಾಡಿ "ನಾವು ಪ್ರತಿಯೊಂದು ವಿಚಾರಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಅಧ್ಯಯನ ಮಾಡಬೇಕಾಗಿದೆ. ಎಲ್ಲಾ ತರಗತಿಗಳಿಗೆ ಹಾಜರಾಗಿ ಕಲಿಕೆಯತ್ತ ಗಮನ ನೀಡಬೇಕು" ಎಂದು ಕರೆ ನೀಡಿದರು.
ಎಸ್ಕೆಎಸ್ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಕಾರ್ಯಾಧ್ಯಕ್ಷರಾದ ಖಾಸಿಂ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಮೆಂಟಲಿಸ್ಟ್ ಶಾಕಿರ್ ಫೈಝಿ ಹಾಗೂ ಅಬೂಬಕ್ಕರ್ ರಿಯಾಝ್ ರಹ್ಮಾನಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು.
ಸಂಘಟನೆಯ 35ನೇ ವಾರ್ಷಿಕದ ಪ್ರಯುಕ್ತ ಉರುಮಣೆಯಿಂದ ದೇರಳಕಟ್ಟೆ ವರೆಗೆ ಯುವ ಜನತೆಯಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನ ವಿರುದ್ಧ ಕಾಲ್ನಡಿಗೆ ಜಾಥಾ ನಡೆಯಿತು.
ದೇರಳಕಟ್ಟೆಯಲ್ಲಿ ಜಾಥಾ ಸಮಾರೋಪದಲ್ಲಿ ಎಸ್ಕೆಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಮಜೀದ್ ದಾರಿಮಿ ಕಿನ್ಯ, ಹಕೀಮ್ ಪರ್ತಿಪ್ಪಾಡಿ, ದೇರಳಕಟ್ಟೆ ವಲಯ ಸಮಿತಿ ಅಧ್ಯಕ್ಷರಾದ ಫಾರೂಕ್ ದಾರಿಮಿ, ಪ್ರಧಾನ ಕಾರ್ಯದರ್ಶಿ ನೌಶಾದ್ ದೇರಳಕಟ್ಟೆ, ಖಾದರ್ ಫೈಝಿ ಮಂಗಳನಗರ, ಕಿನ್ಯ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಮುಸ್ತಫ ಫೈಝಿ ಕಿನ್ಯ, ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಝೀಝ್ ಅಸ್ಲಮಿ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ಎಸ್ಕೆಎಸ್ಎಸ್ಎಫ್ ಜಿಲ್ಲಾ ಸಮಿತಿ ಸದಸ್ಯರಾದ ಬದ್ರುದ್ದೀನ್ ಕುಕ್ಕಾಜೆ, ಶಾಹುಲ್ ಸೂರಿಂಜೆ, ಇಂತಿಯಾಝ್ ಇಡ್ಯಾ, ಬಶೀರ್ ಸಾಗರ್, ಅಝೀಝ್ ಮಲಿಕ್ ,ಬದ್ರುದ್ದೀನ್ ಮರಕ್ಕಿಣಿ, ಮುನೀರ್ ಅಬ್ದುಲ್ ಕಾದಿರ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಹಾರಿಸ್ ಕುದ್ರೋಳಿ, ಮಂಗಳ ನಗರ ಜಾಮಿಅ ಮಸ್ಜಿದುನ್ನೂರ್ ಅಧ್ಯಕ್ಷರಾದ ಮೊಯಿದಿನ್ ಕುಂಞ ಬಾವು ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಅಬೂಬಕ್ಕರ್ ಸ್ವಾಗತ್, ದೇರಳಕಟ್ಟೆ ಎಸ್ ವೈ ಎಸ್ ಉಪಾಧ್ಯಕ್ಷರಾದ ಮುಹಮ್ಮದ್ ಪನೀರ್, ಎಸ್ಕೆಎಸ್ ಎಸ್ಎಫ್ ದೇರಳಕಟ್ಟೆ ವಲಯ ಕೋಶಾಧಿಕಾರಿ ಅಶ್ರಫ್ ಮಾರಾಠಿಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸ್ವಾಗತಿಸಿದರು. ಇರ್ಫಾನ್ ಅಸ್ಲಮಿ ಹಾಗೂ ಮೀಡಿಯಾ ವಿಂಗ್ ಜಿಲ್ಲಾ ಕನ್ವೀನರ್ ಕಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.







