ಎಎಪಿ ದ.ಕ.ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ವಿಶುಕುಮಾರ್
ಮಂಗಳೂರು : ಆಮ್ ಆದ್ಮಿ ಪಾರ್ಟಿ ಕರ್ನಾಟಕದ ದ.ಕ. ಜಿಲ್ಲಾ ಘಟಕಕ್ಕೆ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದಾರೆ.
ಅಧ್ಯಕ್ಷರಾಗಿ ಡಾ. ಬಿ.ಕೆ. ವಿಶುಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಎಲಿಮಲೆ, ಸಂಘಟನಾ ಕಾರ್ಯ ದರ್ಶಿಯಾಗಿ ಶಾನನ್ ಪಿಂಟೋ, ಸದಾಶಿವ ರಾವ್, ಜನಾರ್ದನ ಬಂಗೇರ, ಮಹಿಳಾ ಘಟಕದ ಅಧ್ಯಕ್ಷರಾಗಿ ವಿದ್ಯಾ ರಾಕೇಶ್, ಕೋಶಾಧಿಕಾರಿಯಾಗಿ ಅವ್ರೆನ್ ಡಿಸೋಜ, ಮಾಧ್ಯಮ ಪ್ರಭಾರಿಯಾಗಿ ವೆಂಕಟೇಶ ಬಾಳಿಗಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ರಶೀದ್ ಜಟ್ಟಿಪಳ್ಳ, ಮೀನುಗಾರರು ಮತ್ತು ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್, ಜಿಲ್ಲಾ ಕಾರ್ಯದರ್ಶಿಯಾಗಿ ಜೆ.ಪಿ. ರಾವ್, ಗುರುಪ್ರಸಾದ್ ಮೆರ್ಕಾಜೆ, ಕಬೀರ್ ಕಾಟಿಪಳ್ಳ, ಸೀಮಾ ಮಡಿವಾಳ್, ಗ್ಲಾವಿನ್ ಡಿಸೋಹ, ಫ್ಲೋರಿನ್ ಗೋವಸ್, ಥಾಮಸ್ ಮಥಿಯಾಸ್, ಜಂಟಿ ಕಾರ್ಯದರ್ಶಿಯಾಗಿ ರೋಶನ್ ಪೆರಿಸ್, ಗಣೇಶ್ ಕಂದಡ್ಕ, ಜಯದೇವ ಕಾಮತ್ ಹಾಗೂ ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ದೇವಿಪ್ರಸಾದ್ ಬಜಿಲಕೇರಿ, ಎಸ್ಸಿ-ಎಸ್ಟಿ ವಿಭಾಗದ ಅಧ್ಯಕ್ಷೆಯಾಗಿ ಸುಮನಾ ಬೆಳ್ಳಾರ್ಕರ್ ಅವರನ್ನು ನೇಮಿಸಲಾಗಿದೆ.
ರಾಜ್ಯದ ಜಂಟಿ ಕಾರ್ಯದರ್ಶಿಗಳಾಗಿ ಸಂತೋಷ್ ಕಾಮತ್, ವೇಣುಗೋಪಾಲ ಪುಚ್ಚಪ್ಪಾಡಿ, ರಾಜ್ಯ ಉಪಾಧ್ಯಕ್ಷರಾಗಿ ವಿವೇಕಾನಂದ ಸಾಲಿನ್ಸ್ ನೇಮಕಗೊಂಡಿದ್ದಾರೆ.





