ಹುತಾತ್ಮ ಯೋಧರಿಗೆ ಸುರತ್ಕಲ್ ಸಮಾನ ಮನಸ್ಕ ಸಂಘಟನೆ, ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಭೆ

ಸುರತ್ಕಲ್ : ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಐವರು ಯೋಧರು ಹಾಗೂ ದಿ. ಕ್ಯಾ. ಪ್ರಾಂಜಲ್ ಅವರಿಗೆ ಸುರತ್ಕಲ್ ಸಮಾನ ಮನಸ್ಕ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಭೆ ಗುರುವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾನ ಮನಸ್ಕ ಸಂಘಟನೆಗಳ ಮುಖಂಡ ಮುನೀರ್ ಕಾಟಿಪಳ್ಳ, ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಹಾಗೂ ಅವರ ಬಲಿದಾನವನ್ನು ನಾವು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಸಭೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಸೋತ್ತಮ ಚಿತ್ರಾಪುರ, ಸಾಮರಸ್ಯ ಮಂಗಳೂರು ಸಂಘಟನೆಯ ಮಂಜುಳಾ, ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹುತಾತ್ಮ ಹೋಧರಿಗೆ ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಸಮಾನ ಮನಸ್ಕ ಸಂಘಟನೆಗಳಾದ ಡಿವೈಎಫ್ ಐ ಸುರಯ್ಕಲ್, ಸಿಪಿಎಂ ಸುರತ್ಕಲ್, ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್, ಕಥೋಲಿಕ್ ಸಭಾ ಸುರತ್ಕಲ್, ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂಮೆಂಟ್, ಯಂಗ್ ಫ್ರೆಂಡ್ ಕುಳಾಯಿ, ಕುಲಾಲ ಕುಂಬಾರರ ವೇದಿಕೆ ಸುರತ್ಕಲ್, ಆಟೊ ಚಾಲಕ ಮಾಲಕರ ಸಂಘ ಸಿಐಟುಯು ಕಾನ ಘಟಕ, ಪ್ಯಾರಡೈಸ್ ಯೂತ್ ಕ್ಲಬ್ ಕೃಷ್ಣಾಪುರ, ಎನ್ಎಫ್‌ಸಿ ಕ್ರಿಕೇಟರ್ ಕೃಷ್ಣಾಪುರ, ಟಾರ್ಫೊಡೋಸ್ ಯೂತ ಕ್ಲಬ್ ಕಾನ, ರಿಲಾಯನ್ಸ್ ಕ್ರಿಕೇಟರ್ ಕಾಟಿಪಳ್ಳದ ಮುಖಂಡರು, ಪದಾಧಿಕಾರಿಗಳು ಸಾರ್ವನಿಕರು ಉಪಸ್ಥಿತರಿದ್ದರು.
ವೀರ ಯೋಧ ಕ್ಯಾ. ಪ್ರಾಂಚಲ್ ಅವರ ಚಿತೆಯ ಬೆಂಕಿ ಆರಿಲ್ಲ. ಅಷ್ಟರಲ್ಲೇ ನಮ್ಮ ಶಾಸಕರು ಅವರ ಹೆಸರನ್ನು ವೃತ್ತಗಳು, ರಸ್ತೆಗಳಿಗೆ ಇಡುವ ತಯಾರಿಯಲ್ಲಿದ್ದಾರೆ. ಯೋಧರ ವೀರ ಮರಣದಲ್ಲಿ ರಾಜಕೀಯ ಮಾಡುವ ಗೀಳನ್ನು ಶಾಸಕರು ಬಿಡಬೇಕು ಎಂದು ಮುನೀರ್ ಕಾಟಿಪಳ್ಳ ಅವರು ಹೇಳಿದರು.







