ಹ್ಯಾಮರ್ ತ್ರೋ ಪಂದ್ಯಾಟ: ಪೃಥ್ವಿ ಕೆ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಪುತ್ತೂರು: 2023-24 ಸಾಲಿನ ಪದವಿಪೂರ್ವ ಬಾಲಕಿಯರ ವಿಭಾಗದ ರಾಜ್ಯ ಮಟ್ಟದ ಹ್ಯಾಮರ್ ತ್ರೋ ಸ್ಪರ್ಧಾ ವಿಭಾಗದಲ್ಲಿ ಪೃಥ್ವಿ.ಕೆ ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೃಥ್ವಿ ಕೆ ಅವರು ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದ ವಿಜೇತರಾದರು.
ಪುತ್ತೂರಿನ ಸಂತ ಲೋಮಿನ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ಪೃಥ್ವೀ ಅವರು ಆರ್ಯಾಪು ಗ್ರಾಮದ ಪಪರ್ಂಜ ನಿವಾಸಿ ಚಂದ್ರ ಸೌಗಂಧಿಕಾ ಮತ್ತು ವಿದ್ಯಾಲಕ್ಷ್ಮಿ ದಂಪತಿಯ ಪುತ್ರಿ.
Next Story





