Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜನತಾ ಕಾಲನಿ ಶಾಲೆಯ ಜಮೀನು ವಿವಾದವು...

ಜನತಾ ಕಾಲನಿ ಶಾಲೆಯ ಜಮೀನು ವಿವಾದವು ಕಂದಾಯ ನಿರೀಕ್ಷಕರು, ತಹಶಿಲ್ದಾರ್‌ ಯಡವಟ್ಟಿನಿಂದ ನಡೆದಿದೆ: ಗ್ರಾಮಸ್ಥರ ಆರೋಪ

ವಾರ್ತಾಭಾರತಿವಾರ್ತಾಭಾರತಿ1 Dec 2023 10:59 PM IST
share
ಜನತಾ ಕಾಲನಿ ಶಾಲೆಯ ಜಮೀನು ವಿವಾದವು ಕಂದಾಯ ನಿರೀಕ್ಷಕರು, ತಹಶಿಲ್ದಾರ್‌ ಯಡವಟ್ಟಿನಿಂದ ನಡೆದಿದೆ: ಗ್ರಾಮಸ್ಥರ ಆರೋಪ

ಸುರತ್ಕಲ್‌ : ಜನತಾ ಕಾಲನಿ ಶಾಲೆಯ ಜಮೀನು ವಿವಾದವು ಆಶ್ರಯ ಕಾಲನಿ ನಿವೇಶನ ಕಾಯ್ದಿರಿಸುವ ವೇಳೆ ಇದ್ದ ಕಂದಾಯ ನಿರೀಕ್ಷಕರು ಮತ್ತು ತಹಶಿಲ್ದಾರ್‌ ಅವರ ಯಡವಟ್ಟಿನಿಂದ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ತಹಶೀಲ್ದಾರ್‌ ಅವರು ತನಿಖೆ ನಡೆಸಿ ವರದಿ ನೀಡಿದ್ದು, ಇದರಲ್ಲಿ ಕಾನ‌ ಕಟ್ಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಟದ ಮೈದಾನದ ಸರ್ವೆ ನಂ. 16ಆಗಿದ್ದು, ಇಲ್ಲಿ 94ಸಿ ಅಡಿ 13 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಿವೇಶನಗಳನ್ನು ಅಂದಿನ ಶಾಸಕ ಮೊಯ್ದೀನ್‌ ಬಾವ ಶಾಸಕರಾಗಿದ್ದ ಸಂದರ್ಭ ಮಂಜೂರಾತಿ ಪಡೆದು ಬಳಿಕ ಭರತ್‌ ಶೆಟ್ಟಿ ಶಾಸಕರಾದ ಪ್ರಥಮ ಅವಧಿಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಹಲವು ವರ್ಷಗಳ ಕಾಲ ಸುರತ್ಕಲ್‌ ವಲಯ ದಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ ಮುಂಬಡ್ತಿ ಪಡೆದು ಸದ್ಯ ಸುರತ್ಕಲ್‌ ವಿಭಾಗದ ಉಪ ತಹಶಿಲ್ದಾರ್‌ ಆಗಿರುವ ನವೀನ್‌ ಅವರ ಕಂದಾಯ ನಿರೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಎಡವಟ್ಟು ಕಾರಣ ಎಂದು ಗ್ರಾಮಸ್ಥರಾದ ಶರೀಫ್‌, ಐ. ಮುಹಮ್ಮದ್‌ ಮೊದಲಾದವರು ಆರೋಪಿಸಿದ್ದಾರೆ.

ಶಾಲೆಯ ಭೂ ಹಗರಣ ಸಂಬಂಧ ವದರಿಯಲ್ಲಿ ತಿಳಿಸಿರುವಂತೆ ಶಾಲೆಗೆ ಮಂಜೂರಾಗಿದ್ದ ಜಾಗದಲ್ಲಿ 94ಸಿ ಅಡಿ 13 ನಿವೇಶನಗಳನ್ನು ಹಂಚಲಾಗಿದೆ ಎಂದು ತಿಳಿದು ಬಂದಿದ್ದು, ಆಶ್ರಯ ಕಾಲನಿಯ ಸರ್ವೇ ನಂ. 161/1ಪಿ ಎಂದು ಅದರ ಆರ್‌ಟಿಸಿಯಲ್ಲಿ ನಮೂದಾಗಿದೆ. ಹಾಗಾದರೆ, ಉಪ ತಹಶೀಲ್ದಾರ್‌ ಅವರು ವರದಿಯಲ್ಲಿ ಹೇಳಿರುವ 13 ನಿವೇಶನಗಳು ಹಂಚಿಕೆಯಾಗಿರುವ ಭೂಮಿ ಯಾವುದು? ಜೊತೆಗೆ ಶಾಲೆಗೆ ಕಾಯ್ದಿರಿಸಿದ್ದ ಜಾಗದಲ್ಲಿ ಆಶ್ರಯ ಕಾಲನಿ ನಿರ್ಮಾಣ ವಾಗಿರುವುದಾದರೆ, ಅಂದಿನ ಕಂದಾಯ ನಿರೀಕ್ಷಕರು ಮತ್ತು ತಹಶೀಲ್ದಾರ್‌ ಅವರು ಎಡವಟ್ಟು ಮಾಡಿಕೊಂಡು ಶಾಲೆಯ ಜಾಗವನ್ನು ಆಶ್ರಯ ಕಾಲನಿಗೆ ನೀಡಿದರೇ ಎಂಬ ಪ್ರಶ್ನೆಯನ್ನೂ ಗ್ರಾಮಸ್ಥರು ಕೇಳುತ್ತಿದ್ದಾರೆ.

ಒಟ್ಟಾರೆಯಾಗಿ ಜನತಾ ಕಾಲನಿ ಸರಕಾರಿ ಶಾಲೆಯ ಭೂ ವಿವಾದದಲ್ಲಿ ಕಂದಾಯ ನಿರೀಕ್ಷರು ಮತ್ತು ತಹಶೀಲ್ದಾರ್‌ ಅವರ ಎಡವಟ್ಟುಗಳು ಎದ್ದು ಕಾಣುತ್ತಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ವಿವಾದದವನ್ನು ಬಗೆಹರಿಸಿ ಪ್ರಸ್ತುತ ಇರುವ ಶಾಲೆ ಮತ್ತು ಆಟದ ಮೈದಾನವನ್ನು ಶಾಲೆಗೇ ನೀಡಬೇಕೆಂಬ ಬೇಡಿಕೆ ಗ್ರಾಮಸ್ಥರದ್ದು.

ಭೂ ಮಾಲಕರಿಗೇ ತಿಳಿದಿಲ್ಲದ ನಿವೇಶನ ! ತಿಳಿದಿದ್ದು ಹೇಗೆ?

ಜನತಾ ಕಾಲನಿ ಸರಕಾರಿ ಶಾಲೆಯ ಭೂ ವಿವಾದ ಏಳುವ 6ತಿಂಗಳ ಹಿಂದೆ ಪ್ರಸ್ತುತ ಶಾಲೆ ಇರುವ ಜಾಗದಲ್ಲಿನ ಭೂಮಿಯನ್ನು ಅಗೆದು ಯುಜಿಡಿಗೆ ಸಂಬಂಧಿಸಿದ ಪೈಪ್‌ಲೈನ್‌ ವೊಂದನ್ನು ಮಾಡಲಾಗಿತ್ತು. ಈ ಸಂಬಂಧ ಜಾಗವು ಸರಕಾರಿ ಭೂಮಿ ಎಂದೇ ಭಾವಿಸಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಬಳಿಕ ಪರಿಹಾರ ವಿತರಣೆಯ ಸಂದರ್ಭ ಸರಕಾರಿ ಅಧಿಕಾರಿಗಳು ಜಾಗದ ಮಾಲಕ ಎಂದು ಸರಕಾರಿ ಭೂಮಿ ಕಬಳಿಸಿದ ಆರೋಪ ಎದುರಿಸುತ್ತಿರುವ ಸ್ಥಳೀಯ ರೊಬ್ಬರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಆತ ಭೂಮಿ ತನ್ನದೆಂದು ವಾದ ಆರಂಭಿಸಿ, ಶಾಲೆಗೆ ಸರಕಾರದ ವತಿಯಿಂದ ಕಟ್ಟಲಾಗಿದ್ದ ಕಾಂಪೌಂಡ್‌ ಗೋಡೆಯನ್ನೂ ಕೆಡವಿ ಮನೆ ನಿರ್ಮಿಸಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.

"ಉಪ ತಹಶಿಲ್ದಾರ್‌ ನವೀನ್‌ ಅವರು ನೀಡಿರುವ ವರದಿಯ ಮೇಲೆ ಗ್ರಾಮಸ್ಥರಿಗೆ ನಂಬಿಕೆ ಇಲ್ಲ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲೇ ಗಂಭೀರ ಮತ್ತು ಸಮರ್ಪಕ ತನಿಖೆಯಾಗಬೇಕು. ಸರಕಾರಿ ಅಧಿಕಾರಿಗಳ ಎಡವಟ್ಟುಗಳಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಜಿಲ್ಲಾಧಿಕಾರಿಯವರ ತನಿಖೆಯ ಬಳಿಕ ಶಾಲೆ ಮತ್ತು ಆಟದ ಮೈದಾನ ಖಾಸಗಿ ಭೂಮಿ ಎಂದು ತಿಳಿದು ಬಂದರೆ, ಸರಕಾರಿ ಮೌಲ್ಯದಂತೆ ಭೂ ಮಾಲಕರಿಗೆ ಪರಿಹಾರ ನೀಡಿ ಶಾಲೆ ಮತ್ತು ಆಟದ ಮೈದಾನವನ್ನು ಜಿಲ್ಲಾಡಳಿತ ಉಳಿಸಬೇಕು. ಯಾವುದೇ ಕಾರಣಕ್ಕೂ ಶಾಲೆ ಮತ್ತು ಆಟದ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ".

- ಬಿ.ಕೆ. ಇಮ್ತಿಯಾಝ್‌

ಜನತಾ ಕಾಲನಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X