ಮಲಾರ್: ನೂರುಲ್ ಇಸ್ಲಾಂ ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಕೊಣಾಜೆ, ಡಿ.2: ಪ್ರಸಕ್ತ ದಿನಗಳಲ್ಲಿ ಮಕ್ಕಳು ಸ್ಮಾರ್ಟ್ ಆಗಿದ್ದು, ಅವರಿಗೆ ತಕ್ಕಂತೆ ಪೋಷಕರು ಸ್ಮಾರ್ಟ್ ಆಗುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಿರುವುದು ಶ್ಲಾಘನೀಯ ಎಂದು ದೇರಳಕಟ್ಟೆ ರೇಂಜ್ ಜಮೀಯ್ಯತುಲ್ ಮುಅಲ್ಲಿಮೀನ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ದಾರಿಮಿ ಅಭಿಪ್ರಾಯಪಟ್ಟರು.
ಹರೇಕಳ ಗ್ರಾಮದ ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿನ್ಯ ವಾದಿತ್ತೈಬ ಅಧ್ಯಕ್ಷ ಅಮೀರ್ ತಂಙಳ್ ಕಿನ್ಯ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಸೈಫುಲ್ಲಾ ಬಾಖವಿ, ದೇರಳಕಟ್ಟೆ ಮದ್ರಸ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಬೂಬಕರ್ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಶರೀಫ್ ಪಟ್ಟೋರಿ, ಶೇಖಬ್ಬ ಕಿನ್ಯ, ದೇರಳಕಟ್ಟೆ ಮನಾರುಲ್ ಹುದಾ ಮಸೀದಿಯ ಸಯ್ಯದಲಿ ದೇರಳಕಟ್ಟೆ, ಪರೀಕ್ಷಾ ಮಂಡಳಿಯ ಅಧ್ಯಕ್ಷ ಬಿ.ಎಂ.ಅಲಿ ಅಸ್ಲಮಿ, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಆಸಿಫ್ ಇಕ್ಬಾಲ್, ಉಪಾಧ್ಯಕ್ಷ ಮುಸ್ತಫ ಮಲಾರ್, ಪ್ರಧಾನ ಕಾರ್ಯದರ್ಶಿ ರಹ್ಮತುಲ್ಲಾ, ಕಾರ್ಯದರ್ಶಿ ಝಕರಿಯಾ ಮಲಾರ್, ಜತೆ ಕಾರ್ಯದರ್ಶಿಗಳಾದ ಝಾಯಿದ್ ಮಲಾರ್, ನಿಯಾಫ್ ಮಲಾರ್, ಸದಸ್ಯರಾದ ಎಚ್.ಎಂ.ಮುಹಮ್ಮದ್, ಅಬ್ದುಲ್ ರಹ್ಮಾನ್, ಝುಬೈರ್, ಅಬ್ದುಲ್ ಅಝೀಝ್, ಸಂಶುದ್ದೀನ್, ಎಂ.ಬಿ.ಅಬ್ದುಲ್ ಹಮೀದ್, ಮುಅದ್ದಿನ್ ಮೊಯ್ದು ಶರೀಫ್ ಉಮೈದಿ ಉಪಸ್ಥಿತರಿದ್ದರು.
ನೂರುಲ್ ಇಸ್ಲಾಂ ಮದ್ರಸದ ಮುಖ್ಯಶಿಕ್ಷಕ ಅಬ್ದುಲ್ ಅಝೀಝ್ ಅಸ್ಲಮಿ ಕಾರ್ಯಕ್ರಮ ನಿರೂಪಿಸಿದರು.







