ದ.ಕ. ಜಿಲ್ಲಾಸ್ಪತ್ರೆಯ ಆರೋಗ್ಯ ಸಮಿತಿಗೆ ಸದಸ್ಯರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ 8 ಮಂದಿ ಸದಸ್ಯರನ್ನು ಕೂಡಲೇ ಜಾರಿಗೆ ಬರುವಂತೆ ಸರಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ.
ಕೆ.ಎಂ. ಅಬ್ದುಲ್ ಕರೀಮ್ ಗೇರುಕಟ್ಟೆ -ಅಲ್ಪ ಸಂಖ್ಯಾತ, ಪದ್ಮನಾಭ ಅಮೀನ್ ದಂಬೇಲು-ಹಿಂದುಳಿದ ವರ್ಗ, ಜಿ ಶಶಿಧರ ಕುಂಟಲ್‌ಗುಡ್ಡೆ-ಸಾಮಾನ್ಯ, ಅನಿಲ್.ಎನ್ ರಸ್ಕಿನ್ನಾ ಪಂಪುವೆಲ್- ಸಾಮಾನ್ಯ, ಲಾರೆನ್ಸ್ ಪ್ರಕಾಶ್ ಪಿಂಟೊ ಕೆರೆಬೈಲು- ಸಾಮಾನ್ಯ, ದಾಮೋದರ ಮುರ-ಪರಿಶಿಷ್ಟ ಜಾತಿ, ಪ್ರಮೀಳ ಈಶ್ವರ್ ಕಾಂಬೋಡಿಬೊಟ್ಟು-ಮಹಿಳೆ, ಜಯರಾಮ ಅಲಂಗಾರು-ಪರಿಶಿಷ್ಟ ಪಂಗಡ ಎಂದು ಸರಕಾರದ ಅಧೀನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಪದ್ಮ ವಿ ಆದೇಶದಲ್ಲಿ ತಿಳಿಸಿದ್ದಾರೆ.
Next Story





