ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಸೌಹಾರ್ದ ಗಾನ

ಮಂಗಳೂರು : ‘ಪತ್ತಪ್ಪೆಜೋಕುಲು ಒಂಜಿ ಮಟ್ಟೆಲ್ಡ್’ (ಹತ್ತು ತಾಯಂದಿರ ಮಕ್ಕಳು ಒಂದು ಮಡಿಲಲ್ಲಿ) ಎಂಬ ದ್ಯೇಯ ವಾಕ್ಯ ದೊಂದಿಗೆ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ - ಕರ್ನಾಟಕ ಇದರ ಅಂಗವಾಗಿ ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ‘ಸೌಹಾರ್ದ ಗಾನ’ವು ಶನಿವಾರ ತಣ್ಣೀರುಬಾವಿ ಕಡಲತೀರದಲ್ಲಿ ನಡೆಯಿತು.
ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಕುಮಾರ್ ಉದ್ಘಾಟಿಸಿದರು. ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು, ಹೊಸತು ಮಾಸಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ್ , ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಸಬೀಹ ಭೂಮಿಗೌಡ , ಬ್ಯಾರಿ ವೆಲ್ಫೇರ್ ಫೋರಂ ಅಬುದಾಬಿ ಇದರ ಅಧ್ಯಕ್ಷ ಮುಹಮ್ಮದ್ ಆಲಿ ಉಚ್ಚಿಲ್, ವೈದ್ಯ ಡಾ. ಝಕೀರ್ ಯೂಸುಫ್ ಹುಸೈನ್, ಉದ್ಯಮಿ ಅಯಾಝ್ ಕೈಕಂಬ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಮಾಜಿ ಕಾರ್ಪೊರೇಟರ್ ಕೆ.ಪಿ.ಪಣಿಕರ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಮಾಜಿ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶ್, ರೋನಿ ಕ್ರಾಸ್ಟ, ರಿಷಲ್ ಕ್ರಾಸ್ಟ, ಮುಹಮ್ಮದ್ ಇಕ್ಬಾಲ್, ಅಶ್ಫಾಕ್ ಕಾಟಿಪಳ್ಳ, ಫೈಝ್ ಕಾಟಿಪಳ್ಳ, ಖಾಲಿದ್, ಮನೋಹರ್, ಅಝರ್ ದಾಜಿನ್ ಸೌಹಾರ್ದ ಗೀತೆ ಹಾಡಿದರು. ಒಕ್ಕೂಟದ ಕಾರ್ಯಾಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.





