ಉಳ್ಳಾಲದಲ್ಲಿ ಸೀರತ್ ಸಮಾವೇಶ

ಮಂಗಳೂರು : ಯುನಿವೆಫ್ ಕರ್ನಾಟಕವು ‘ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಉಳ್ಳಾಲ ನಗರಸಭೆ ಮೈದಾನದಲ್ಲಿ ಸೀರತ್ ಸಮಾವೇಶ ನಡೆಯಿತು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ನಮ್ಮ ಕುಟುಂಬ ಜೀವನ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯ ದಲ್ಲಿ ಮುಖ್ಯ ಭಾಷಣಗೈದರು.
ಉದ್ಯಮಿ ಯು.ಬಿ.ಮುಹಮ್ಮದ್ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಯು.ಕೆ.ಖಾಲಿದ್, ದಕ್ಷಿಣ ವಲಯಾಧ್ಯಕ್ಷ ಅಡ್ವೋಕೇಟ್ ಸಿರಾಜುದ್ದೀನ್ ಹಾಗೂ ಉಳ್ಳಾಲ ಶಾಖಾಧ್ಯಕ್ಷ ಫಝಲ್ ಮುಹಮ್ಮದ್ ಉಪಸ್ಥಿತರಿದ್ದರು.
ಅಭಿಯಾನ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿರಾಜ್ ಕುಂಪಲ ಕಿರಾಅತ್ ಪಠಿಸಿದರು. ಉಮರ್ ಮುಖ್ತಾರ್ ಕಾರ್ಯಕ್ರಮ ನಿರೂಪಿಸಿದರು.
Next Story





