ರಾಜ್ಯ ಮಟ್ಟದ ಕ್ರೀಡಾಕೂಟ: ದ.ಕ.ಜಿಲ್ಲೆ ಸಮಗ್ರ ಟೀಮ್ ಚಾಂಪಿಯನ್

ಪುತ್ತೂರು : ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ 17ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದ.ಕ.ಜಿಲ್ಲೆ 61 ಅಂಕಗಳೊಂದಿಗೆ ಸಮಗ್ರ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಟೋರ್ಟ್ ಸ್ಕೂಲ್ ಮತ್ತು ಬಾಲಕಿಯರ ವಿಭಾಗದಲ್ಲಿ ದ.ಕ ಜಿಲ್ಲೆ ತಂಡ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.
100ಮೀಟರ್ಸ್ ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ದ.ಕ.ಜಿಲ್ಲೆಯ ಗೋಪಿಕಾ ಜಿ ಅವರು 12ನಿಮಿಷ 87 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಚಿನ್ನದ ಪದಕ ಪಡೆಯುವುದರೊಂದಿಗೆ ಕೂಟದ ವೇಗದ ಓಟಗಾರ್ತಿಯಾದರು. ಜತೆಗೆ 100ಮೀಟರ್ಸ್ ಓಟದಲ್ಲಿ 865 ಅಂಕಗಳನ್ನು ಗಳಿಸಿ ಬಾಲಕಿಯರ ವಿಭಾಗದಲ್ಲಿ ಕೂಟದ ಬೆಸ್ಟ್ ಅಥ್ಲೆಟಿಕ್ ಆಗಿ ಮೂಡಿಬಂದರು. ಬೆಂಗಳೂರಿನ ವಿದ್ಯಾನಗರ ಸ್ಟೋರ್ಟ್ ಸ್ಕೂಲ್‍ನ ಎ.ಅಬೂಬಕ್ಕರ್ 100ಮೀಟರ್ಸ್ ಓಟದಲ್ಲಿ 11ನಿಮಿಷ 01 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ವೇಗದ ಓಟಗಾರರಾದರು.
ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಪೋಟ್ಸ್ ಸ್ಕೂಲ್ 21 ಅಂಕಗಳೊಂದಿಗೆ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, 17 ಅಂಕಗಳನ್ನು ಪಡೆದ ದ.ಕ.ಜಿಲ್ಲೆ ದ್ವಿತೀಯ ತಂಡ ಚಾಂಪಿಯನ್ ಗರಿಮೆಗೆ ಪಾತ್ರವಾಗಿದೆ. ಬಾಲಕಿಯರ ವಿಭಾಗದಲ್ಲಿ 44 ಅಂಕಗಳನ್ನು ಪಡೆದ ದ.ಕ. ಜಿಲ್ಲೆ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದು, 21 ಅಂಕಗಳನ್ನು ಪಡೆದ ಶಿರಸಿ ಜಿಲ್ಲೆ ದ್ವಿತೀಯ ತಂಡ ಚಾಂಪಿಯನ್ ಮನ್ನಣೆಗೆ ಪಾತ್ರವಾಗಿದೆ.
ಚಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಟೋರ್ಟ್ ಸ್ಕೂಲ್‍ನ ಸಯ್ಯದ್ ಸಬೀರ್ 400 ಮೀಟರ್ಸ್ ಓಟದಲ್ಲಿ 885 ಅಂಕಗನ್ನು ಪಡೆದು ಬೆಸ್ಟ್ ಅಥ್ಲೆಟಿಕ್ ಆಗಿ ಮೂಡಿಬಂದಿದ್ದಾರೆ. ಹಾಸನದ ಸುಮಂತ್ ಬಿ.ಎಸ್ ಅವರು 10 ಅಂಕ ಗಳೊಂದಿಗೆ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಹಾಗೂ ಬಾಲಕಿಯರ ವಿಭಾಗದಲ್ಲಿ 15 ಅಂಕಗಳನ್ನು ಪಡೆದ ಬೆಂಗಳೂರು ಉತ್ತರದ ಹರ್ಷಿತಾ ಪಿ ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.
ದ.ಕ.ಜಿಲ್ಲೆಯ ಕರಿಷ್ಮಾ ನೂತನ ದಾಖಲೆ:
ಬಾಲಕಿಯರ ವಿಭಾಗದ 1500 ಮೀಟರ್ಸ್ ಓಟದಲ್ಲಿ ದ.ಕ ಜಿಲ್ಲಾ ತಂಡವನ್ನು ಪ್ರತಿನಿಧಿಸಿರುವ ಕಡಬದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ಅವರು ದಾಖಲೆ ಬರೆದಿದ್ದಾರೆ. 4ನಿಮಿಷ 55.1 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಅವರು ಈ ಹಿಂದೆ 2017-18ನೇ ಸಾಲಿನಲ್ಲಿ ಬೆಂಗಳೂರು ಉತ್ತರದ ಹರ್ಪಿತಾ ಎಚ್.ವಿ ( 4ನಿಮಿಷ 58.19 ಸೆಕೆಂಡ್) ಮಾಡಿದ್ದ ದಾಖಲೆ ಮುರಿದರು. ಇದಲ್ಲದೆ 3000 ಮೀಟರ್ಸ್ ಓಟದಲ್ಲಿ ಚಿನ್ನ ಮತ್ತು 800 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ತೋರಿದರು.
ಇಂದಿನ ಫಲಿತಾಂಶ
ಬಾಲಕರ ವಿಭಾಗದ 100 ಮೀ. ಓಟದಲ್ಲಿ ಎ. ಅಬೂಬಕ್ಕರ್(ವಿದ್ಯಾನಗರ), 11ನಿ.01 ಸೆ-ಪ್ರಥಮ, ಮೋನಿಷ್ ಚಂದ್ರ ಶೇಖರ್(ಬೆಂಗಳೂರು ದಕ್ಷಿಣ) 11.07ಸೆ-ದ್ವಿತೀಯ, ತರುಣ್ ವಿ(ಬೆಂಗಳೂರು ದಕ್ಷಿಣ)11.37ಸೆ.-ತೃತೀಯ, 400 ಮೀ. ಓಟದಲ್ಲಿ ಸೆಯ್ಯಿದ್ ಶಬ್ಬೀರ್(ವಿದ್ಯಾನಗರ) 49.79ಸೆ-ಪ್ರಥಮ, ನಿತಿನ್ ಗೌಡ ಎಂ(ಬೆಂಗಳೂರು ಗ್ರಾಮಾಂತರ) 51.07ಸೆ-ದ್ವಿತೀಯ, ಆಯುಷ್ ಪ್ರಾಂಜಲ್(ದಕ್ಷಿಣ ಕನ್ನಡ) 51.60ಸೆ-ತೃತೀಯ, 1500 ಮೀ. ಓಟದಲ್ಲಿ ದಕ್ಷ್ ಪಾಟಿಲ್(ಬೆಳಗಾವಿ) 4ನಿ. 21ಸೆ-ಪ್ರಥಮ, ಪ್ರಕಾಶ್ ಬಡಗಿ(ಧಾರವಾಡ) 4ನಿ.22ಸೆ.-ದ್ವಿತೀಯ, ಧನುಷ್ ಮೋಹನ್ ನಾಯ್ಕ್(ಉತ್ತರ ಕನ್ನಡ) 4ನಿ. 23.7ಸೆ-ತೃತೀಯ, 5000 ಮಿ.ನಡಿಗೆಯಲ್ಲಿ ವಿಕಾಸ್ ಗೌಡ (ದ.ಕ) 24ನಿ.57.5ಸೆ-ಪ್ರಥಮ, ಬಸವರಾಜ ಮಂಜಪ್ಪ ಹೂಗಾರ್(ತುಮಕೂರು) 25ನಿ.00.8ಸೆ-ದ್ವಿತೀಯ, ಮಡಿವಾಳ ಸಿದ್ದೇಶ(ಮಂಡ್ಯ) 25ನಿ. 47.9 ಸೆ,-ತೃತೀಯ, ಟ್ರಿಪ್ಪಲ್ ಜಂಪ್‍ನಲ್ಲಿ ಸುಮಂತ ಕೆ.ಎಸ್(ಹಾಸನ) 13.20 ಮೀ-ಪ್ರಥಮ, ಧರ್ಮೇಂದ್ರ ಸುಬ್ರಾಯ ಗೌಡ(ಉತ್ತರ ಕನ್ನಡ)12.75 ಮೀ-ದ್ವಿತೀಯ, ಮನೀಶ್ (ಉಡುಪಿ) 12.71 ಮೀ-ತೃತೀಯ.
ಪೋಲ್ ವೋಲ್ವ್‍ನಲ್ಲಿ ಪ್ರಜ್ವಲ್(ದ.ಕ) 2.90 ಮೀ-ಪ್ರಥಮ, ನರಸಿಂಹ(ಬಳ್ಳಾರಿ)2.85ಮೀ-ದ್ವಿತೀಯ, ಐಯಾನ್ ರಝಾ(ಶಿವಮೊಗ್ಗ) 2.80 ಮೀ.-ತೃತೀಯ, ಡಿಸ್ಕಸ್ ತ್ರೋ ಅವಿನಾಶ್ ತಳಕೇರಿ(ವಿಜಯಪುರ) 41.47 ಮೀ.-ಪ್ರಥಮ, ಲೋಹಿತ್ ಕುಮಾರ್ ಎಚ್(ಬೆಂಗಳೂರು ದಕ್ಷಿಣ)39.13ಮೀ-ದ್ವಿತೀಯ, ಖಾದರ್ ವೇಲು ಎಸ್(ಚಾಮರಾಜನಗರ) 37.57 ಮೀ-ತೃತೀಯ, ಹ್ಯಾಮರ್ ತ್ರೋದಲ್ಲಿ ಆದಿತ್ಯ(ಉಡುಪಿ)51.80 ಮೀ-ಪ್ರಥಮ, ಸಲೀಂ(ಚಿಕ್ಕಮಗಳೂರು)50.46 ಮೀ-2ದ್ವಿತೀಯ, ಇಶಾನ್ ಕಾರ್ಯಪ್ಪ ಸೆರಾಜೆ(ದ.ಕ)49.51 ಮೀ-ತೃತೀಯ, 4*100 ಮೀ. ರಿಲೇಯಲ್ಲಿ ಪ್ರಥ್ವಿರಾಜ್,ಆರ್.ಜೆ, ಶಹೀಲ್, ರೆನಿಶ್ ಎಂ ಕುಲಾಲ್, ಆಯುಷ್ ಪ್ರಜ್ವಲ್(ದ.ಕ) 45.28ಸೆ-ಪ್ರಥಮ, ಸಯ್ಯಿದ್ ಶಬ್ಬೀರ್, ಎ.ಅಬೂಬಕ್ಕರ್, ಬಸವರಾಜ್ ಡಿ ಗುಲೆದ್, ಸೇರಿದಾರ್ ದೇಸಾಯಿ(ವಿದ್ಯಾನಗರ)45.45ಸೆ-ದ್ವಿತೀಯ ಮತ್ತು ತರುಣ್ ವಿ, ಮೋನಿಸ್ ಚಂದ್ರಶೇಖರ್, ದಿನೇಶ್ ರಾಜನ್, ಇಸಾಕ್ ಆರ್(ಬೆಂಗಳೂರು ದಕ್ಷಿಣ)46.34ಸೆ.-ತೃತೀಯ ಸ್ಥಾನ ಪಡೆದುಕೊಂಡರು.
ಬಾಲಕಿಯರ ವಿಭಾಗ
ಬಾಲಕಿಯರ ವಿಭಾಗದ 400 ಮೀ ಓಟದಲ್ಲಿ ರಶ್ಮಿತಾ ಗೌಡ(ರಾಮನಗರ)1ನಿ.00.899ಸೆ-ಪ್ರಥಮ, ಸುಪ್ರಿಯಾ ಗೌಡ (ಉತ್ತರ ಕನ್ನಡ) 1ನಿ. 02.344ಸೆ-ದ್ವಿತೀಯ, ನಿಖಿತಾ ಜಿ(ಶಿವಮೊಗ್ಗ)1ನಿ. 03.211ಸೆ-ತೃತೀಯ, 1500 ಮೀ, ಓಟದಲ್ಲಿ ಚರಿಷ್ಮಾ(ದ.ಕ) 4ನಿ.55.1ಸೆ-ಪ್ರಥಮ(ಹೊಸ ದಾಖಲೆ), ವೀಕ್ಷಿತ ಬಿ.ಎಸ್(ಚಿಕ್ಕಮಗಳೂರು)5ನಿ. 03.9ಸೆ-ದ್ವಿತೀಯ, ಶಿವಕ್ಕ ಹೆಗಡೆ(ಚಿಕ್ಕೋಡಿ) 5ನಿ. 04.2ಸೆ-ತೃತೀಯ, 3000 ಮೀ ನಡಿಗೆಯಲ್ಲಿ ಚೈತನ್ಯ(ದ.ಕ)16ನಿ. 40ಸೆ-ಪ್ರಥಮ, ಶೋಭಾ ಪುಂಜಿ(ಬೆಳಗಾವಿ)16ನಿ.48.7ಸೆ-ದ್ವಿತೀಯ, ಶೃತಿ ಮುಡೂರು(ಹಾವೇರಿ)17ನಿ.01.2ಸೆ-ತೃತೀಯ, ತ್ರಿಪಲ್ ಜಂಪ್‍ನಲ್ಲಿ ಅರ್ಶಿತಾ ಪಿ(ಬೆಂಗಳೂರು ಉತ್ತರ)10.58ಮೀ-ಪ್ರಥಮ, ಶ್ರೀದೇವಿ ನಾಯ್ಕ್(ಶಿರಸಿ)10.14 ಮೀ-ದ್ವಿತೀಯ, ಅಮೂಲ್ಯ(ಶಿವಮೊಗ್ಗ)10.07ಮೀ-ತೃತೀಯ, ಪೋಲ್ ವಾಲ್ವ್‍ನಲ್ಲಿ ಧನ್ಯ(ದ.ಕ)2.60ಮೀ-ಪ್ರಥಮ, ಪ್ರಜ್ಞಾಶ್ರೀ(ದ.ಕ) 2.10ಮೀ-ದ್ವಿತೀಯ, ದಿವ್ಯಾ ಸಿ ನಾಯ್ಕ್(ಉತ್ತರ ಕನ್ನಡ)2.10ಮೀ-ತೃತೀಯ, ಗುಂಡು ಎಸೆತದಲ್ಲಿ ತನುಶ್ರೀ ರೈ(ದ.ಕ-ಪಟ್ಟೆ ಪ್ರತಿಭಾ ಪ್ರೌಢಶಾಲೆ)11.16ಮೀ-ಪ್ರಥಮ, ಹರ್ಷಿತಾ ಎ. ಸರ್ಗಾಪುರ್(ಬೆಂಗಳೂರು ದಕ್ಷಿಣ) 10.63ಮೀ-ದ್ವಿತೀಯ, ಕೀರ್ತನಾ ಜಿ.ಎಸ್(ಮಂಡ್ಯ) 9.95ಮೀ-ತೃತೀಯ, ಜಾವೆಲಿನ್ ತ್ರೋದಲ್ಲಿ ಭವ್ಯ(ಹಾಸನ)33.91ಮೀ-ಪ್ರಥಮ, ಶ್ರೀದೇವಿ ನಾಯಕ್(ಶಿರಸಿ)32.91ಮೀ-ದ್ವಿತೀಯ, ಸಿಂಪನಾ(ಹಾಸನ)29.50,ಮೀ-ತೃತೀಯ, 4*400 ಮೀ. ರಿಲೇಯಲ್ಲಿ ಸುಸ್ಮಿತಾ ಸಿದ್ದಿ, ಮೀನಾಕ್ಷಿ ನಾಯ್ಕ್, ಅಕ್ಕಮ್ಮ ಕೋಕರೆ, ಅಮಿನಾ ಮುಳ್ಳ(ಶಿರಸಿ)54.009ಸೆ-ಪ್ರಥಮ, ಗೋಪಿಕಾ ಜಿ, ನಯೋನಿಕಾ, ಬೆಲ್ಸಿಟಾ ಜಸ್ಮಿನ್, ಚಿನ್ಮಯ್(ದ.ಕ)54.179ಸೆ-ದ್ವಿತೀಯ, ಅವನಿ, ಅನ್ವಿ ಎ ಶೆಟ್ಟಿ, ಧನ್ಯ, ಅಹೈನಾ ಶೇಖ್(ಉಡುಪಿ)54.370ಸೆ-ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.







