ಬಂಟ್ವಾಳ: ಹೋಟೆಲ್ ಕಾರ್ಮಿಕ ಆತ್ಮಹತ್ಯೆ

ಬಂಟ್ವಾಳ : ಹೋಟೆಲ್ ಕಾರ್ಮಿಕನೋರ್ವ ಚೀಟಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮ ನಿವಾಸಿ ಶೇಖರ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಂಟ್ವಾಳ ಬಡ್ಡಕಟ್ಟೆಯ ಹೋಟೆಲ್ ಒಂದರಲ್ಲಿ ಐದು ತಿಂಗಳಿನಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ಈತ ಸೋಮವಾರ ರಾತ್ರಿ ಕೆಲಸ ಮುಗಿಸಿ ಮಲಗಿದ್ದು, ಮಂಗಳವಾರ ಮುಂಜಾನೆ ಹೋಟೆಲ್ ನ ಅಡುಗೆ ಕೆಲಸಕ್ಕೆ ಬರಬೇಕಾಗಿದ್ದ ಇವರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕ ಕರೆ ಮಾಡಿದಾಗ ಕರೆ ಸ್ವೀಕರಿಸಿದೆ ಇದ್ದುದರಿಂದ ಸಂಶಯಗೊಂಡು ವಿಶ್ರಾಂತಿ ಕೊಠಡಿಗೆ ತೆರಳಿದಾಗ ಆತ ಮಲಗಿರುವ ಪಕ್ಕ ವಿಷದ ಬಾಟಲಿ ಮತ್ತು ಚೀಟಿಯೊಂದಿದ್ದು, ಈತ ವಿಷ ಸೇವಿಸಿರುವ ಬಗ್ಗೆ ಸಂಶಯದಿಂದ ಪೋಲೀಸರಿಗೆ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್.ಐ. ರಾಮಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





