ನಾಗುರಿ ಬಳಿ ಕೊಳವೆ ಸ್ಥಳಾಂತರ ಕಾಮಗಾರಿ ತ್ವರಿತ: ಮೇಯರ್ ಸುಧೀರ್ ಕುಮಾರ್

ಮಂಗಳೂರು, ಡಿ.6: ನಾಗುರಿ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಪೂರೈಕೆಯ 1000 ಎಂಎಂ ಕೊಳವೆ ಸ್ಥಳಾಂತರ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಯಿಂದಾಗಿ ನೀರು ಹೋಗದೆ ಸಮಸ್ಯೆ ಆದ ಸ್ಥಳಗಳಿಗೆ ಡಿ. 7ರ ಮಧ್ಯಾಹ್ನದ ಬಳಿಕ ನೀರು ಪೂರೈಕೆಯಾಗಲಿದೆ ಎಂದು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ದುರಸ್ತಿ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮೇಯರ್, ರಾತ್ರಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೇಯರ್ ಪ್ರಕಟನೆ ತಿಳಿಸಿದೆ.
Next Story





