ಮಂಗಳೂರು : ಕಾಂಗ್ರೆಸ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

ಮಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರ ಮಹಾಪರಿನಿರ್ವಾಣ ದಿನವನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದರು. ಬಳಿಕ ಮಾತನಾಡಿದ ಅವರು, ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ ಅಂಬೇಡ್ಕರ್ ಅವರು ದೇಶದ ಮಹಾನ್ ಧೀಮಂತ ನಾಯಕ. ದೇಶದ ಬಡಜನರಿಗೆ ಸಮಾನ ಅವಕಾಶ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣದ ಹಕ್ಕು ನೀಡುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿದರು. ಎಲ್ಲ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಿ ಭಾರತವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಶ್ರಮಿಸಿದರು ಎಂದರು.
ನಾವು ಅವರ ತತ್ವಾದರ್ಶ, ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನ ಆಶಯಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಪದ್ಮರಾಜ್ .ಆರ್, ಮಮತಾ ಗಟ್ಟಿ, ಪದ್ಮನಾಭ ನರಿಂಗಾನ, ಜೆ.ಅಬ್ದುಲ್ ಸಲೀಂ, ವಿಶ್ವಾಸ್‌ದಾಸ್, ಬಿ.ಎಂ ಅಬ್ಬಾಸ್ ಅಲಿ, ಗಣೇಶ ಪೂಜಾರಿ, ಅಶ್ರಫ್ ಬಜಾಲ್, ಮುಹಮ್ಮದ್ ಕುಂಜತ್ತಬೈಲ್, ಜಯಶೀಲಾ ಅಡ್ಯಂತಾಯ, ಟಿ.ಹೊನ್ನಯ್ಯ, ಪದ್ಮನಾಭ ಅಮೀನ್, ಟಿ.ಕೆ ಸುಧೀರ್, ಸಬಿತಾ ಮಿಸ್ಕಿತ್, ಉದಯ ಆಚಾರ್ಯ, ಹೈದರ್ ಬೋಳಾರ್, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಸಲೀಮ್, ಯಶವಂತ್ ಪ್ರಭು, ನೀತ್ ಶರಣ್, ಲಕ್ಷ್ಮಣ ಶೆಟ್ಟಿ, ಯೋಗೀಶ್ ನಾಯಕ್, ಮುಸ್ತಫಾ ಡಿ.ಎಂ, ಮಲ್ಲಿಕಾರ್ಜುನ್ ಕೋಡಿಕಲ್, ರವಿರಾಜ್ ಪೂಜಾರಿ, ಸಮರ್ಥ್ ಭಟ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ವಂದಿಸಿದರು.







