ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನಾಚರಣೆ

ಮಂಗಳೂರು, ಡಿ.6: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ. ದ. ಕ. ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ. ಆರ್. ಅಂಬೇಡ್ಕರ್ 67ನೇ ಪರಿನಿಬ್ಬಾಣ ದಿನವನ್ನು ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನವನ್ನಾಗಿ ಮಂಗಳೂರಿನ ಡಿ. ಗ್ರೂಪ್ ನೌಕರರ ಭವನದಲ್ಲಿ ಆಚರಿಸಲಾಯಿತು.
ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್ ಅವರು ಅಂಬೇಡ್ಕರ್ ಅವರು ತನ್ನ ಬಾಲ್ಯದಿಂದಲೇ ಮನುವಾದಿ ವ್ಯವಸ್ಥೆಯ ಅಸಮಾನತೆಯ ಕರಿನೆರಳಿನಲ್ಲಿ ನಾನಾ ಬಗೆಯ ದಬ್ಬಾಳಿಕೆ, ದೌರ್ಜನ್ಯಗಳನ್ನು ತನ್ನ ಜೀವಮಾನವಿಡೀ ಅನುಭವಿಸಿ ಅದರ ವಿರುದ್ಧ ಸೆಟೆದು ನಿಂತು, ಅಂತಿಮವಾಗಿ ಎಲ್ಲರಿಗೂ ಸಮಾನತೆಯನ್ನು ನೀಡುವಂತಹ ಲಿಖಿತ ಸಂವಿಧಾನವನ್ನು ಬರೆಯುವ ಮೂಲಕ ಈ ದೇಶದ ಶೋಷಿತ ಸಮುದಾಯದ ಕೋಟ್ಯಂತರ ಜನರಿಗೆ ಸಾಮಾಜಿಕ ಅಸಮಾನತೆಯಿಂದ ವಿಮೋಚನೆಯ ದಾರಿಯನ್ನು ಕಾನೂನು ಬದ್ಧವಾಗಿ ಕಲ್ಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ನಡೆಸಿದ ಭೀಮ್ ಆರ್ಮಿ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ಯವರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಅಂಬೇಡ್ಕರ್ ರವರ ಭಾವಚಿತ್ರವನ್ನು ಹೊತ್ತು ಮೆರವಣಿಗೆ ಮಾಡುವ ಬದಲು ಅವರ ಬರಹ, ಭಾಷಣಗಳನ್ನು ಅರಿಯಬೇಕಾಗಿದೆ ಎಂದು ಕಿವಿಮಾತು ನುಡಿದರು.
ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ರಘು. ಕೆ. ಎಕ್ಕಾರು ವಹಿಸಿದ್ದರು. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ತಾಲೂಕು ಸಂಘಟನಾ ಸಂಚಾಲಕ ರುಕ್ಕಯ್ಯ ಅಮೀನ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು.
ಲಕ್ಷ್ಮಣ್ ಕಾಂಚನ್ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗೇಶ ಚಿಲಿಂಬಿ, ಗಿರಿಜಾ ನಾಗೇಶ್ , ಬಾಲು ಕುಂರ್, ರಾಜಯ್ಯ ಮಂಗಳೂರು, ದೊಂಬಯ್ಯ ಕಟೀಲು, ಸುರೇಶ್ ಬೆಳ್ಳಾಯರ್, ಮಂಜಪ್ಪ ಪುತನ್, ರಾಮರಾಯ ಕೋಡಿಕಲ್ ಮುಂತಾದವರು ಭಾಗವಹಿಸಿದ್ದರು. ಕಮಲಾಕ್ಷ ಬಜಾಲ್ ಸ್ವಾಗತಿಸಿ, ರವಿ ಪೇಜಾವರ ವಂದಿಸಿದರು.







