ಕಣಚೂರು ಫಾರ್ಮಕಾಲಜಿ ವಿಭಾಗದ ಕಾರ್ಯಾಗಾರ

ದೇರಳಕಟ್ಟೆ: ಕಣಕೂರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಾಟೆಕಲ್ ಇದರ ಆಶ್ರಯದಲ್ಲಿ ಆರೋಗ್ಯ ಸಂಶೋಧನೆಯಲ್ಲಿ ಉತ್ತಮ ಕ್ಲಿನಿಕಲ್ ಅಭ್ಯಾಸ ಮತ್ತು ಸುರಕ್ಷತೆ ವರದಿ ಆಧರಿಸಿ ಫಾರ್ಮಕಾಲಜಿ ವಿಭಾಗದ ಕಾರ್ಯಾಗಾರ ಗುರುವಾರ ನಡೆಯಿತು.
ಕಣಚೂರು ಹೆಲ್ತ್ ಸೈನ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮಾತನಾಡಿ, ಔಷಧಿ ವಿತರಣೆ ಮತ್ತು ಚಿಕಿತ್ಸೆ ಇವೆರಡರಲ್ಲಿ ಬಹಳಷ್ಟು ಜಾಗೃತಿ ಇರಬೇಕಾಗುತ್ತದೆ. ಡಯಬಿಟಿಸ್, ಮಲೇರಿಯಾ, ಸಕ್ಕರೆ ಕಾಯಿಲೆ ಯಂತಹ ಕಾಯಿಲೆಗಳಿಗೆ ಚಿಕಿತ್ಸೆ, ಔಷಧಿ ಇದ್ದರೂ ಗುಣಮುಖ ಕಾಣಲು ವಿಳಂಬ ಆಗುತ್ತಿದೆ ಎಂದು ಹೇಳಿದರು.
ಸದಸ್ಯಪ್ರೊ. ಡಾ. ಎಂ ವಿ ಪ್ರಭು ಮಾತನಾಡಿದರು. ಹಾಜಿ ಯು.ಕೆ. ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ಕಾಲೇಜು ಆಸ್ಪತ್ರೆಯ ಡೀನ್ ಪ್ರೊ. ಡಾ.ರತ್ನಾಕರ ಯುಪಿ ,ವೈದ್ಯಕೀಯ ಅಧೀಕ್ಷಕ ಪ್ರೊ ಡಾ.ಹರೀಶ್ ಶೆಟ್ಟಿ, ಸಂಘಟನಾ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ವಿಶ್ವಕಾಂತ್ ಬಿ , ಫಾರ್ಮಕಾಲಜಿ ವಿಭಾಗದ ಪ್ರೊ ಡಾ. ಶ್ಯಾಮ್ಜಿತ್ ಎಂ. ವೈಜ್ಞಾನಿಕ ಸಮಿತಿಯ ಸಹಾಯಕ ಪ್ರೊ. ಡಾ. ಪ್ರಜ್ಞಾ ವಿ ರಾಜ್ ,ಡಾ. ಶಾ ನಾಸಿರುದ್ದೀನ್ ಸಹಾಯಕ. ಫಾರ್ಮಕಾಲಜಿ ವಿಭಾಗದ ಸಹಾಯಕ. ಪ್ರೊ.ಡಾ.ಸುಕೇಶ್ ಎಂ.ಭಟ್, ಡಾ ರೋಹನ್ ಮೋನಿಸ್, ಪ್ರೊ.ಡಾ.ಶಹನವಾಝ್ ಉಪಸ್ಥಿತರಿದ್ದರು.







