ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರಿಂದ ಅಸಾಮಾನ್ಯ ಕೊಡುಗೆ: ಡಾ.ಬಿ.ಎಚ್.ಎಂ. ದಾರುಕೇಶ
ಸಿನರ್ಜಿಯಾ 2023

ಮಂಗಳೂರು: ಭಾರತೀಯ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ಜಗತ್ತು ಭಾರತೀಯ ವಿಜ್ಞಾನಿಗಳ ಕಡೆ ನೋಡುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಎಂ.ದಾರುಕೇಶ್ ತಿಳಿಸಿದ್ದಾರೆ.
ಅವರು ಇಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ದೇಶದ ವಿವಿಧ ಸಂಸ್ಥೆ ಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ಕಾರ್ಯಕ್ರಮ 'ಸಿನರ್ಜಿಯಾ 2023'ಸೈನ್ಸ್ ಟ್ಯಾಲೆಂಟ್ ಹಂಟನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ನಳಂದ ತಕ್ಷ ಶಿಲದಂತಹ ಶಿಕ್ಷಣ ಕೇಂದ್ರ ಗಳು ಜಗತ್ತಿನ ಜ್ಞಾನದ ಕೇಂದ್ರ ಗಳಾಗಿ ಕೊಡುಗೆ ನೀಡಿವೆ. ಇತ್ತೀಚಿನ ಇಸ್ರೋ ಬಾಹ್ಯಾಕಾಶ, ತಂತ್ರಜ್ಞಾನ ಕ್ಷೇತ್ರದ ಸಾಧನೆ, ಚಂದ್ರ ನ ಮೇಲೆ ಮಾಡಿದ ಸಾಧನೆಗಳ ಜೊತೆ ಭಾರತದ ವಿಜ್ಞಾನಿಗಳು ಸಾಮಾನ್ಯರಾಗಿ ಬೆಳೆದು ಜಗತ್ತಿನ ವಿಜ್ಞಾನ ಕ್ಷೇತ್ರದಲ್ಲಿ ಅಸಾಮಾನ್ಯ ಕೊಡುಗೆ ಗಳನ್ನು ನೀಡಿದ ಸಾಧನೆ ಮಾಡಿದ್ದಾರೆ. ಆದೂದರಿಂದ ಜಾಗತಿಕ ವಾಗಿ ಭಾರತೀಯ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಿದೆ ಎಂದರು.ವಿದ್ಯಾರ್ಥಿಗಳ ತಾಂತ್ರಿಕ ಪರಿಣತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿನರ್ಜಿಯಾ ದಂತಹ ಕಾರ್ಯ ಕ್ರಮ ಪರಿಣಾಮಕಾರಿ ಎಂದು ಶುಭ ಹಾರೈಸಿದರು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜನಗೇರಿ ಪ್ರಾಸ್ತಾವಿ ಕವಾಗಿ ಮಾತನಾಡುತ್ತಾ,ಮೂರು ದಿನ ಗಳ ಕಾಲ ಹಮ್ಮಿಕೊಂಡಿರುವ ಈ ಕಾರ್ಯ ಕ್ರಮದಲ್ಲಿ ದೇಶದ 200ಕ್ಕೂ ಹೆಚ್ಚು ಸಂಸ್ಥೆ ಗಳ ಶಾಲೆ,ಕಾಲೇಜು, ಎನ್ಐಟಿ,ಐಐಟಿ ಸೇರಿದಂತೆ 600ಕ್ಕೂ ಹೆಚ್ಚು ವಿದ್ಯಾರ್ಥಿ ಗಳನ್ನು ಒಂದೇ ವೇದಿಕೆಯಲ್ಲಿ ತಲುಪುವ ಗುರಿ ಹೊಂದಿದೆ. ಈ ಕಾರ್ಯ ಕ್ರಮ ವಿದ್ಯಾರ್ಥಿಗಳ ಪ್ರಾವೀಣ್ಯತೆಯ ಪ್ರದರ್ಶನ, ತಾಂತ್ರಿಕ ನಾವೀನ್ಯತೆ,ಜ್ಞಾನಾರ್ಜನೆ ಗೂ ಪೂರಕವಾಗಿದೆ ಎಂದರು. ಡಿ.9ರಂದು ಪ್ರತಿಭಾ ಶೋಧನೆಯ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣೆ ನಡೆಯಲಿದೆ ಎಂದರು.
ಸಹ್ಯಾದ್ರಿ ಕಾಲೇಜಿನ (ಆರ್ &ಡಿ ವಿಭಾಗದ )ನಿರ್ದೇಶಕ ಡಾ.ಮಂಜಪ್ಪ ಸಾರಥಿ ಮಾತನಾಡುತ್ತಾ,ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ ಯವರ ಚಿಂತನೆಯ ಫಲವಾಗಿ ಈ ರೀತಿಯ ವಿದ್ಯಾರ್ಥಿಗಳ ಪ್ರತಿಭಾ ಶೋಧ, ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮ 2011ರಿಂದ ಆರಂಭಗೊಂಡು ನಡೆಯುತ್ತಿದೆ.ಪರಿಣಾಮ ವಾಗಿ ಇಲ್ಲಿನ ಯುವ ತಂತ್ರಜ್ಞರು ದೇಶ ವಿದೇಶದಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯ ದಿಂದ ಕೊಡುಗೆ ನೀಡಲು ಸಾಧ್ಯ ವಾಗಿದೆ ಎಂದರು.
ನೇತ್ರಾವತಿ ನದಿ ತೀರದ ಬಾನಂಗಳದಲ್ಲಿ ಹಾರಾಡಿದ ಪುಟಾಣಿ ವಿಮಾನಗಳು
ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿಯ ನೇತ್ರಾವತಿ ನದಿ ಕಿನಾರೆಯ ಸಹ್ಯಾದ್ರಿ ಮೈದಾನದಲ್ಲಿ ಸಮಾರಂಭದ ಬಳಿಕ ದೇಶದ ವೈಮಾನಿಕ ಮಾದರಿ ಮತ್ತು ಏರೋ ಮೋಡೆಲಿಂಗ್ ತಯಾರಕರಾದ ಆರ್.ಸಿ.ಪ್ಲೈಯರ್ ಗಳಿಂದ ಸಹ್ಯಾದ್ರಿಯ ನೇತ್ರಾವತಿ ಕಡಲ ಕಿನಾರೆಯಲ್ಲಿ ಪ್ರಮುಖ ಆಕರ್ಷಣೆ ಯಾಗಿ ಏರ್ ಶೋ ನಡೆಯಿತು. ಈ ಪ್ರದರ್ಶನ ದಲ್ಲಿ ವಿವಿಧ ಮಾದರಿಯ ಪುಟಾಣಿ ವಿಮಾನ ಗಳು ಬಾನಂಗಳದಲ್ಲಿ ಕಸರತ್ತು ನಿಯಂತ್ರಕರ ಮೂಲಕ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಂಡಾರಿ ಫೌಂಡೇಶನ್ ನ ಕಾರ್ಯ ದರ್ಶಿ ಪ್ರಸನ್ನ ಭಂಡಾರಿ, ಟ್ರಸ್ಟಿ ದೇವದಾಸ್ ಹೆಗ್ಡೆ, ಜಗನ್ನಾಥ ಚೌಟ, ಸಿಇಒ ಜಾನ್ಸನ್ ಟೆಲ್ಲಿಸ್, ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ರಾದ ಪ್ರಶಾಂತ್ ರಾವ್,ಕಮ್ಯಕನಿಟಿ ಮ್ಯಾನೇಜರ್ ವಿಷ್ಣು ಪ್ರದೀಪ್, ಸಿನಾರ್ಜಿ 2023ರ ಸಂಘಟಕ ಪ್ರಜ್ವಲ್ ಮೊದಲಾದವರು ಉಪಸ್ಥಿತರಿದ್ದರು. ನಿಹಾರಿಕ ಭಟ್ ನಿರೂಪಿಸಿದರು.ಉಪನ್ಯಾಸಕಿ ಸೌಮ್ಯಶ್ರೀ ವಂದಿಸಿದರು.







