ಮೂಡುಬಿದಿರೆ ಕೇಂದ್ರ ಬದ್ರಿಯಾ ಜುಮಾ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭ

ಮೂಡುಬಿದಿರೆ, ಡಿ.9: ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಟೌನ್ ಮೂಡುಬಿದಿರೆಗೆ ಹಾಗೂ ಕೋಟೆಬಾಗಿಲು ಬದ್ರಿಯಾ ಜುಮಾ ಮಸೀದಿ ಮತ್ತು ಪುತ್ತಿಗೆಯ ರಿಫಾಯಿ ಜುಮಾ ಮಸೀದಿಗಳಿಗೆ ಖಾಝಿಯಾಗಿ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಅಲ್ ಖಾಸಿಮಿಯವರನ್ನು ಖಾಝಿಯಾಗಿ ಸ್ವೀಕರಿಸುವ ಸಮಾರಂಭವು ಕೇಂದ್ರ ಟೌನ್ ಮಸೀದಿಯಲ್ಲಿ ಡಿ 8ರಂದು ಜರುಗಿತು.
ಮಸೀದಿಯ ಅಧ್ಯಕ್ಷ ಎಂ.ಅಬ್ದುಲ್ ರಹಿಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಕೇಂದ್ರ ಬದ್ರಿಯಾ ಜುಮಾ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭ
ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಿದ್ದೀಕ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟೆಬಾಗಿಲು ಜುಮಾ ಮಸೀದಿಯ ಅಧ್ಯಕ್ಷ ಸಲೀಂ, ಖತೀಬ್ ಇಸ್ಮಾಯೀಲ್ ಫೈಝಿ, ಪುತ್ತಿಗೆ ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಸಬೀಲ್, ಖತೀಬ್ ಮುಹಮ್ಮದ್ ರಫೀಕ್, ಜ್ಯೋತಿ ನಗರ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಲಾಡಿ ಮಸ್ಜಿದುನ್ನೂರ್ ಜುಮಾ ಮಸೀದಿಯ ಖತೀಬ್ ಅಕ್ರಂ ಅಲಿ ತಂಙಳ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝಿಝ್ ಮಾರಿಕ್ ವಂದಿಸಿದರು.





