ಸಾರ್ವಜನಿಕರ ಸಮಸ್ಯೆಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸ್ಪಂದಿಸಬೇಕು: ಡಾ.ಅಬ್ದುಲ್ ಹಕೀಮ್ ಅಝ್ಹರಿ

ಮಂಗಳೂರು : ಸರಕಾರದ ಸೌಲಭ್ಯಗಳು ಜನರಿಗೆ ತಲುಪುಂತಾಗಲು ಕರ್ನಾಟಕ ಮುಸ್ಲಿಂ ಜಮಾಅತ್ ಸಕ್ರಿಯ ವಾಗಿ ಕಾರ್ಯಾಚರಿಸಬೇಕು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮರ್ಕಝ್ ನಾಲೆಡ್ಜ್ ಸಿಟಿ ಮುಖ್ಯಸ್ಥ ಡಾ. ಅಬ್ದುಲ್ ಹಕೀಮ್ ಅಝ್ಹರಿ ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯು ಇತ್ತೀಚೆಗೆ ಪಾಣೆಮಂಗಳೂರಿನ ಸಾಗರ್ ಆಡಿಟೋರಿ ಯಂನಲ್ಲಿ ಆಯೋಜಿಸಿದ್ದ ‘ಫ್ಲೋರಿಷ್ ಲೀಡರ್ಸ್’ ಕಾರ್ಯಾಗಾರದಲ್ಲಿ ಅವರು ಮುಖ್ಯ ಭಾಷಣಗೈದರು.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಹಾಜಿ ಬಿ.ಎಂ. ಮಮ್ತಾಝ್ ಆಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂ ಸುಫ್‌ಯಾನ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.
ಕೆಎಂಜೆ ರಾಜ್ಯ ನಾಯಕರಾದ ಜಿ.ಎಂ.ಎಂ. ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಅಶ್ರಫ್ ಸಅದಿ ಮಲ್ಲೂರು, ವೆಸ್ಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಕೋಶಾಧಿಕಾರಿ ಎಸ್.ಕೆ.ಅಬ್ದುಲ್ ಖಾದರ್ ಹಾಜಿ, ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುರ‌್ರಹ್ಮಾನ್ ಹಾಜಿ ಅರಿಯಡ್ಕ, ಉಮರಾ ನಾಯಕರಾದ ಶಾಕಿರ್ ಹಾಜಿ ಹೈಸಮ್ ಮತ್ತಿತರು ಉಪಸ್ಥಿತರಿದ್ದರು.
ಕೆಎಂಜೆ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್ ಸಅದಿ ಖತರ್ ಸ್ವಾಗತಿಸಿದರು. ಕಾರ್ಯದರ್ಶಿ ಉಮರ್ ಮಾಸ್ಟರ್ ವಂದಿಸಿದರು.







