ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ತುರ್ತು ಸಭೆ

ಬಜ್ಪೆ, ಡಿ10: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ತುರ್ತು ಸಭೆಯು ಡಿ.8ರಂದು ಬಜ್ಪೆ ಎಂಜೆಎಂ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ ನಾಗರೀಕ ಹಿತ ರಕ್ಷಣಾ ಸಮಿತಿಯ ಮುಖಂಡರು ಮತ್ತು ಸದಸ್ಯರು, ಆಮೆಗತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕುರಿತು ಆಕ್ರೋಶಗಳನ್ನು ಹೊರಹಾಕಿದರು.
ಇದೇ ವೇಳೆ ಸಭೆಯು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿತು. ಡಿ.11ರಂದು ಬೆಳಗ್ಗೆ ಪಿಡ್ಲ್ಯೂಡಿ ಇಲಾಖೆಯ ಎಇ ಮತ್ತು ಎಇಇ ಕಿನ್ನಿಪದವು ಜಂಕ್ಷನ್ ಗೆ ಭೇಟಿ ನೀಡಿ ಜನರ ಬೇಡಿಕೆಯಂತೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ವೇಳೆ ಕಾಮಗಾರಿಯ ಗುಣಮಟ್ಟದ ಕುರಿತು ಅಧಿಕಾರಿಗಳ ಗಮನ ಸೆಳೆಯುವುದು. ಹಳೆಯ ಕಾಮಗಾರಿ ಪೂರ್ಣ ಗೊಳ್ಳದೆ, ಮುಂದುವರಿದ ಕಾಮಗಾರಿ ಮಾಡಲು ಅವಕಾಶ ನೀಡದಿರುವುದು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕಾಮಗಾರಗೆ ಅವಕಾಶ ನಿರಾಕರಿಸುವುದು. ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಸಂಭವಿಸಿದಲ್ಲಿ ಪಿಡ್ಲ್ಯೂಡಿ ಇಲಾಖೆಯನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದು. ಊರಿನ ಒಂದಿಬ್ಬರು ಸ್ವಯಂ ಘೋಷಿತ ನಾಯಕರು, ಪಿಡ್ಲ್ಯೂಡಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಜನರ ದಾರಿತಪ್ಪಿಸುವ ಕೆಲಸ ಮಾಡುವುತ್ತಿದ್ದಾರೆ ಎಂಬ ವದಂತಿಗಳಿಗೆ ಕಿವಿ ಕೊಡದಿರುವುದು.
ನಮ್ಮ ಧರಣಿ ನಿಂತಿಲ್ಲ. ಬದಲಾಗಿ ಮುಂದುವರಿಯಲಿದರ ಎಂಬ ಎಚ್ಚರಿಕೆಯನ್ನು ಇಲಾಖೆಗೆ ನೀಡುವುದು. ಕಿನ್ನಿಪದವು ರಸ್ತೆಯ ಬದಿ ಕಾಂಕ್ರಿಟ್ ಆರಂಭಿಸಬೇಕು, ಅದು ಬಿಟ್ಟು ಬೇರೆ ಕಡೆ ಮಾಡಿದಲ್ಲಿ ನಮ್ಮ ಹೋರಾಟ ಮುಂದುವರಿಸುವುದು. ನಮ್ಮ ಬೇಡಿಕೆ ಈಡೇರದಿದ್ದಲ್ಲಿ, ಉಸ್ತುವಾರಿ ಸಚಿವರು ಮತ್ತು ಲೋಕಾಯುಕ್ತಕ್ಕೆ ದೂರು ನೀಡುವುದು. ಕಳಪೆ ಕಾಮಗಾರಿಯನ್ನು ಪಿಡ್ಲ್ಯೂಡಿ ಇಲಾಖೆಯ ಅಧಿಕಾರಿಗಳ ವಾಗ್ದಾನದಂತೆ ಇದುವರೆಗೂ ಸರಿಮಾಡದಿದ್ದರ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಭೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ, ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್, ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ದೇವದಾಸ್, ಎಂಜೆಎಂ ಮಸೀದಿಯ ಅಧ್ಯಕ್ಷ ಖಾದರ್ ಸಾಬ್, ಮುಲ್ಕಿ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ,ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರಾಕೇಶ್ ಕುಂದರ್ ಸಲೀಮ್ ಹಾಜಿ, ಕುಡುಂಬಿ ಸಮಾಜದ ನಾಯಕರಾದ ಶೇಖರ್ ಗೌಡ ,ಗ್ರಾ .ಪಂ ಸದಸ್ಯರಾದ ನಝೀರ್ ಕಿನ್ನಿಪದವು , ಅಝರ್ , ಹಕೀಮ್ ಕೊಳಂಬೆ ,ಗ್ರಾ.ಪಂ. ಸದಸ್ಯರಾದ ಜೇಕಬ್ ಪಿರೇರಾ, ಅಬ್ಬಾಸ್ ಏರ್ಪೋರ್ಟ್ ,ಎಸ್ಸೆಸ್ಸೆಫ್ ಮುಖಂಡರಾದ ಮುಫೀದ್, ಕೆಪಿಸಿಸಿ ಜಾಲತಾಣದ ಮುಖಂಡರಾದ ಹಫೀಜ್ ಕೊಳಂಬೆ, ಅನ್ವರ್ ಬಜ್ಪೆ, ಅಶ್ರಫ್ ಬಜ್ಪೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಷರೀಫ್, ಎಸ್ ಡಿಪಿಐ ಮುಖಂಡರಾದ ಹಸೈನಾರ್ ,ಇಕ್ಬಾಲ್ ಬಜ್ಪೆ ಸಾಮಾಜಿಕ ಕಾರ್ಯಕರ್ತರು ,ಕ್ರೈಸ್ತ ಮುಖಂಡ ರಾದ ಥೋಮಸ್ ಮತ್ತು ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.







