ಮಾಸ್ಟರ್ ಶೆಫ್ ಬಿರುದು ಪಡೆಯುವ ಕನಸು ನನಸಾಗಿದೆ : ಮೊಹಮ್ಮದ್ ಆಶಿಕ್
ಮಂಗಳೂರು: ನಾನು ಸ್ಪರ್ಧೆಗೆ ಮಂಗಳೂರಿನಿಂದ ಹೋಗುವಾಗ ಮೊಹಮ್ಮದ್ ಆಶಿಕ್ ಆಗಿ ಸ್ಪರ್ಧೆಗೆ ಹೋಗಿದ್ದೆ. ಈಗ ಮಾಸ್ಟರ್ ಶೆಫ್ ಟೈಟಲ್‌ನೊಂದಿಗೆ ವಾಪಸಾಗಿದ್ದೇನೆ. ಕರ್ನಾಟಕದ ಎಲ್ಲರೂ ನನ್ನನ್ನು ಮಾಸ್ಟರ್ ಶೆಫ್ ಮೊಹಮ್ಮದ್ ಆಶಿಕ್ ಎಂದು ಕರೆಯುವಂತಾಗಿದೆ. ಇದು ನಿಮ್ಮಲ್ಲರ ಸಹಕಾರದಿಂದಾಗಿ ಸಾಧ್ಯವಾಗಿದೆ ಎಂದು ಮಾಸ್ಟರ್ ಶೆಫ್ ಚಾಂಪಿಯನ್ ಮೊಹಮ್ಮದ್ ಆಶಿಕ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ತವರಿಗೆ ಆಗಮಿಸಿದ್ದ ಅವರು ʼವಾರ್ತಾಭಾರತಿʼಯೊಂದಿಗೆ ಮಾತನಾಡಿ, ಸ್ಪರ್ಧೆಗೆ ಹೋಗುವಾಗ ಈ ಬಾರಿ ಮಂಗಳೂರಿನವರು ಅಭಿಮಾನಪಡುವ ಸಾಧನೆ ಮಾಡುತ್ತೇನೆ ಎಂಬ ಭರವಸೆ ನನಗಿತ್ತು. ಆದರೆ ನನಗೆ ಸವಾಲು ತುಂಬಾ ಕಠಿಣ ಇತ್ತು. ಹೀಗಿದ್ದರೂ ನನಗೆ ನಿಮ್ಮೆಲ್ಲರ ಹಾರೈಕೆಯಿಂದಾಗಿ ಗುರಿ ತಲುಪಲು ಸಾಧ್ಯವಾಗಿದೆ. ಮುಂದೆ ರೆಸ್ಟೋರೆಂಟ್ ಕೆಫೆ ತೆರೆಯುವ ಯೋಜನೆ ಇದೆ. ನೀರುದೋಸೆ, ಗಿ ರೋಸ್ಟ್ ನನ್ನ ಫೆವರೇಟ್ ಫುಡ್ ಆಗಿದೆ ತಿಳಿಸಿದ್ದಾರೆ.
ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಈ ಮಟ್ಟಕ್ಕೆ ಬೆಳೆಯಲು ನನಗೆ ತುಂಬಾ ಸಹಕಾರ ನೀಡಿದ್ದಾರೆ. ಇವತ್ತು ಇಷ್ಟೊಂದು ಅಭಿಮಾನಿಗಳು ನನ್ನನ್ನು ಸ್ವಾಗತಿಸಲು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ ಹೇಳಿದರು.
‘‘ಮನೆಯಲ್ಲಿ ಹಬ್ಬಕ್ಕೆ ಅವನೇ ಒಳ್ಳೆಯ ಬಿರಿಯಾನಿ ತಯಾರಿಸುತ್ತಿದ್ದ. ಈಗ ಇನ್ನಷ್ಟು ಕಲಿತಿದ್ದಾನೆ".
-ಸಾರಮ್ಮ, ಆಶಿಕ್ ತಾಯಿ
"ಮಗನ ಸಾಧನೆ ನೋಡಿ ತುಂಬಾ ಖುಶಿಯಾಗಿದೆ. ಈ ಸಾಧನೆಗಾಗಿ ಆತ ತುಂಬಾ ಕಷ್ಟಪಟ್ಟಿದ್ದಾನೆ.
ಅಬ್ದುಲ್ ಖಾದರ್, ಆಶಿಕ್ ತಂದೆ