ಸುರತ್ಕಲ್: ರಸ್ತೆ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ

ಸುರತ್ಕಲ್: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ಪೇಟೆಯಲ್ಲಿ ಸೋಮವಾರ ಬೆಳಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಕೇರಳ ಕಣ್ಣೂರು ನಿವಾಸಿ ಮಯೂರ (19), ಕಾಸರಗೋಡು ನಿವಾಸಿ ಭಾವನಾ (19) ಎಂದು ಗುರುತಿಸಲಾಗಿದೆ.
ಇವರು ಸುರತ್ಕಲ್ ವೇಣುಗೋಪಾಲ್ ರಸ್ತೆಯ ಟೌನ್ ವ್ಯೂ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಸೋಮವಾರ ಬೆಳಗ್ಗೆ ಸುರತ್ಕಲ್ ನಿಂದ ಕಾಲೇಜಿಗೆ ಹೋಗಲೆಂದು ರಾಷ್ಟ್ರೀಯ ಹೆದ್ದಾರಿ 66ನ್ನು ದಾಟುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಏಕಾಏಕಿ ಬಂದ ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.
Next Story





